ವಿಶ್ಲೇಷಣೆ-- ಪ್ರವೀಣ್ ನಾರಾಯಣ ರಾವ್
ಬೆಂಗಳೂರು: ಒಂದು ಕಡೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಫುಲ್ ಸಕ್ಸಸ್ ಆಗಿ ಕರ್ನಾಟದಾದ್ಯಂತ ಸಂಚರಿಸ್ತಾ ಲಕಲಕ ಅಂತಾ ಇದ್ರೆ ಈ ಕಡೆ ಕಮಲ ಪಾಳಯದ ಬಿಜೆಪಿ ಫುಲ್ ಸುಸ್ತಾಗಿ ಕುಳಿತಿದೆ.. 40% ಕಮೀಷನ್ ಆರೋಪ, ಪೇಸಿಎಂ ಪೋಸ್ಟರ್ ಅಭಿಯಾನ, ತಾಂಡವವಾಡ್ತಾ ಇರೋ ಭ್ರಷ್ಟಾಚಾರ ಆರೋಪ,ಪಿ.ಎಸ್.ನೇಮಕಾತಿ ಹಗರಣ..
ನೆನೆಗುದಿಗೆ ಬಿದ್ದ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷ ಸದಸ್ಯರ ನೇಮಕ, ತಾರಕಕ್ಕೇರಿರುವ ಪಂಚಮಸಾಲಿ ಮೀಸಲಾತಿ ಹೋರಾಟ, ಇನ್ನೂ ಅನೇಕ ಭಾನಗಡಿಗಳಿಂದ ಬಿಜೆಪಿ ಜರ್ಜರಿತವಾಗಿ ಹೋಗಿದೆ..ಕಾಂಗ್ರೆಸ್ ನವರು ಹೂಡುವ ಒಂದೇ ಒಂದು ತಂತ್ರಕ್ಕೂ ಕೌಂಟರ್ ಕೊಡಲು ಸಾಧ್ಯವಾಗದೆ ಬಿಜೆಪಿ ಕಂಗಾಲಾಗಿ ಹೋಗಿದೆ..
ಜನರಲ್ಲಿ ವಿಶ್ವಾಸ ಮೂಡಿಸಬಲ್ಲ ಒಂದೇ ಒಂದು Subject ಕೂಡಾ ಬಿಜೆಪಿ ಯವರ ಹತ್ತಿರ ಇಲ್ಲದಂತೆ ಆಗಿ ಹೋಗಿದೆ.. ಶುಕ್ರವಾರ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲೂ ಅಷ್ಟೇ ಅಂತಹ ಉತ್ಸಾಹ ಉಲ್ಲಾಸ ಕಂಡು ಬರಲೇ ಇಲ್ಲಾ.. ಅದೇ ಹಳೆಯ ಸಂಕಲ್ಪ ಯಾತ್ರೆಯ ಘೋಷಣೆಯೊಂದಿಗೆ ಸಭೆ ಮುಕ್ತಾಯವಾಗಿದೆ..
ಲಕ್ಷಾಂತರ ಸುರಿದು ಪತ್ರಿಕೆಗಳಿಗೆ ಕೊಟ್ಟ Paid News ತಂತ್ರವೂ ಟುಸ್ ಆಗಿದೆ ಜೊತೆಗೆ ಅದು ಕಾಂಗ್ರೆಸ್ ಪಾಲಿಗೆ ಪ್ಲಸ್ ಆಗಿದೆ..ಅಲ್ಲಿಗೆ ಬಿಜೆಪಿ ಬತ್ತಳಿಕೆಯ ಅಸ್ತ್ರಗಳೆಲ್ಲವೂ ಬರಿದಾಗಿ ಬಿಜೆಪಿ ಕಂಗಾಲಾಗಿ ಕುಳಿತಿದೆ.. ಇದಕ್ಕೆ ಉದಾಹಣೆ ಅಂದ್ರೆ ಕಾಂಗ್ರೆಸ್ ನವರು ಬಿಟ್ಟ ಪೇಸಿಎಂ ಬಾಣದ ಹೊಡೆತಕ್ಕೆ ಇಡೀ ಸರ್ಕಾರ, ಭಾಜಪಾ..ಪತರಗುಟ್ಟಿ ಹೋಗಿದ್ದೇ ಸಾಕ್ಷಿ..!
ಇದೇ ಧೋರಣೆ ಇದೇ ಟೀಂ ಇಟ್ಟುಕೊಂಡು 2023 ರ ಯುದ್ಧಕ್ಕೆ ಹೊಗಿದ್ದೇ ಹೌದಾಗಿದ್ದಲ್ಲಿ ಇವರ ಟಾರ್ಗೆಟ್ ಮಿಷನ್ 150 ಏನಿದ್ಯಲ್ಲಾ ಅದನ್ನ ಮಿಷನ್ ಓನ್ಲೀ 50ಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ ಅಷ್ಟೇ.
PublicNext
10/10/2022 08:27 pm