ಹೈದರಾಬಾದ್: ಮುಸ್ಲಿಂ ಧರ್ಮದ ಜನರೇ ಹೆಚ್ಚು ಕಾಂಡೋಮ್‌ಗಳನ್ನು ಬಳಸುತ್ತಿದ್ದೇವೆ ಎಂದು ಹೈದರಾಬಾದ್ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಮೋಹನ್ ಭಾಗವತ್ ಅವರ ಜನಸಂಖ್ಯೆಯ ಅಸಮತೋಲನದ ಟೀಕೆಗೆ ತೀಕ್ಷ್ಣವಾದ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ, "ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದಾಖಲೆಗಳ ಪ್ರಕಾರ ಮುಸ್ಲಿಮರ ಒಟ್ಟು ಫಲವತ್ತತೆಯ ಪ್ರಮಾಣವು ಶೇಕಡಾ 2ಕ್ಕೆ ಇಳಿದಿದೆ. ನೀವು ಇತಿಹಾಸವನ್ನು ತಪ್ಪಾಗಿ ಪ್ರತಿನಿಧಿಸಿದರೆ ಅದು ನಿಮ್ಮ ತಪ್ಪು"ಎಂದು ಟೀಕಿಸಿದ್ದಾರೆ.
"ಚಿಂತಿಸಬೇಡಿ, ಮುಸ್ಲಿಂ ಜನಸಂಖ್ಯೆ ಚ್ಚಾಗುತ್ತಿಲ್ಲ, ಬದಲಿಗೆ ಕುಸಿಯುತ್ತಿದೆ. ಮುಸ್ಲಿಮರ ಒಟ್ಟು ಫಲವತ್ತತೆ ದರವು ಕುಸಿದಿದೆ. ಕಾಂಡೋಮ್ ಅನ್ನು ಯಾರು ಹೆಚ್ಚು ಬಳಸುತ್ತಿದ್ದಾರೆ? ನಾವು. ಆದರೆ ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ" ಎಂದು ಸಂಸದ ಅಸಾದುದ್ದೀನ್ ಓವೈಸಿ ಬಹಿರಂಗವಾಗಿ ಟೀಕಿಸಿದ್ದಾರೆ.
ಕುರಾನ್‌ನಿಂದ ಉಲ್ಲೇಖವನ್ನು ನೀಡುತ್ತಾ, "ನಾನು ನಿಮ್ಮನ್ನು ಖುರಾನ್ ಓದಲು ಆಹ್ವಾನಿಸುತ್ತೇನೆ. ಭ್ರೂಣವನ್ನು ಕೊಲ್ಲುವುದು ಬಹಳ ದೊಡ್ಡ ಪಾಪ ಎಂದು ಅಲ್ಲಾ ನಮಗೆ ಹೇಳುತ್ತಾನೆ. ಎರಡು ಗರ್ಭಧಾರಣೆಯ ನಡುವೆ ಮುಸ್ಲಿಮರು ಅಂತರ ಕಾಪಾಡುತ್ತಾರೆ. ಜೊತೆಗೆ ಕಾಂಡೋಮ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ" ಎಂದು ಓವೈಸಿ ಪ್ರತಿಕ್ರಿಯಿಸಿದ್ದಾರೆ.
PublicNext
09/10/2022 05:50 pm