ಬೆಂಗಳೂರು: ಸರಕಾರಿ ಕೋಟಾದಡಿ ಪದವಿಪೂರ್ವ ಹಂತದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಅದಕ್ಕೆ ಸಂಬಂಧಿಸಿದ ಕೋರ್ಸ್‌ಗಳ ಸೀಟುಗಳಲ್ಲಿ ಈ ವರ್ಷ 25% ಹೆಚ್ಚಳವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. 2021-22ರಲ್ಲಿ ಈ ಕೋರ್ಸ್‌ಗಳ ಸೀಟುಗಳ ಸಂಖ್ಯೆ 21,804 ಆಗಿದ್ದರೆ, 2022-23ಕ್ಕೆ 27,193ಕ್ಕೆ ಹೆಚ್ಚಾಗಲಿದೆ.
2022-23ಕ್ಕೆ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಸೀಟುಗಳು 1349 ರಷ್ಟು ಹೆಚ್ಚಾದರೆ, CSE-ಡೇಟಾ ಸೈನ್ಸ್‌ನಲ್ಲಿ 1,008 ಸೀಟುಗಳು ಹೆಚ್ಚಾಗಿವೆ, CSE-AI, ಮಷಿನ್ ಲರ್ನಿಂಗ್ ಸೀಟುಗಳು 725, AI ಮತ್ತು ML 526, ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ 410, AI ಮತ್ತು ಡೇಟಾ ವಿಜ್ಞಾನ (AI and data science) 395 ಮತ್ತು CSE-ಇಂಟರ್ನೆಟ್ ಆಫ್ ಥಿಂಗ್ಸ್ 381 ರಷ್ಟು ಸೀಟುಗಳು ಏರಿಕೆಯಾಗಲಿದೆ.
ಹೊಸ ಕೋರ್ಸ್‌ಗಳಲ್ಲಿ CS - ಮಾಹಿತಿ ತಂತ್ರಜ್ಞಾನ - ಸೈಬರ್ ಭದ್ರತೆ (72 ಸ್ಥಾನಗಳು), CS - ರೊಬೊಟಿಕ್ ಎಂಜಿನಿಯರಿಂಗ್- AI ಮತ್ತು ML (72) ಮತ್ತು CSE IoT, ಬ್ಲಾಕ್‌ಚೈನ್ ಸೇರಿದಂತೆ (24) ಸೀಟುಗಳು ಇದರಲ್ಲಿ ಸೇರಿವೆ. ಜೊತೆಗೆ ಮಾಹಿತಿ ತಂತ್ರಜ್ಞಾನವು 26 ಸೀಟುಗಳನ್ನು ಕಳೆದುಕೊಂಡಿದೆ ಮತ್ತು ರೊಬೊಟಿಕ್ಸ್ 12 ಸೀಟುಗಳನ್ನು ಕಳೆದುಕೊಂಡಿದೆ.
PublicNext
09/10/2022 03:24 pm