ತುಮಕೂರು: ‘ನನ್ನ ತಿಳುವಳಿಕೆಯ ಪ್ರಕಾರ, ಆರ್ ಎಸ್ ಎಸ್ ಬ್ರಿಟಿಷರಿಗೆ ಸಹಾಯ ಮಾಡುತ್ತಿತ್ತು ಮತ್ತು ಸಾವರ್ಕರ್ ಬ್ರಿಟಿಷರಿಂದ ಸ್ಟೈಫಂಡ್ ಪಡೆಯುತ್ತಿದ್ದರು’ ಇಂತಹ ಸತ್ಯಗಳನ್ನು ಬಿಜೆಪಿ ಮುಚ್ಚಿಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಸದ್ಯ ರಾಜ್ಯದಲ್ಲಿದೆ. ಇಂದು ತುಮಕೂರಿನ ತುರುವೇಕೆರೆಯಲ್ಲಿ ಯಾತ್ರೆ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ,’ಕಾಂಗ್ರೆಸ್ ಮತ್ತು ಅದರ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಎಲ್ಲೂ ಕಾಣಲಿಲ್ಲ. ಎಂದು ಹೇಳಿದ್ದಾರೆ.
ನಾವು ಹೊಸ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿದ್ದೇವೆ. ಇದು ನಮ್ಮ ದೇಶದ ನೈತಿಕತೆಯ ಮೇಲಿನ ದಾಳಿಯಾಗಿದೆ, ನಮ್ಮ ಇತಿಹಾಸವನ್ನು ತಿರುಚುತ್ತದೆ. ಇದು ಕೆಲವೇ ಜನರ ಕೈಯಲ್ಲಿ ಅಧಿಕಾರವನ್ನು ಕೇಂದ್ರೀಕರಿಸುತ್ತದೆ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ವಿಕೇಂದ್ರೀಕೃತ ಶಿಕ್ಷಣ ವ್ಯವಸ್ಥೆ ನಮಗೆ ಬೇಕು ಎಂದರು.
ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್, ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಭಾಗಿಯಾಗಿದ್ದರು. ಈ ಹಿಂದೆ ಭಾರತ್ ಜೋಡೋ ಯಾತ್ರೆ ವೇಳೆ ಕೇರಳದಲ್ಲಿ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ ಇದೀಗ ಕರ್ನಾಟಕದಲ್ಲಿಯೂ ಸುದ್ದಿಗೋಷ್ಠಿ ನಡೆಸಿದರು.
PublicNext
08/10/2022 04:39 pm