ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ

ಬೆಂಗಳೂರು: ಚೀಣ್ಯ ಗ್ರಾಮದಿಂದ ರಾಹುಲ್ ಗಾಂಧಿಯವರ ಜೊತೆಯಲ್ಲಿ ಹೆಜ್ಜೆ ಹಾಕಿದ ಸೋನಿಯಾ ಗಾಂಧಿಯವರು ಕರ್ನಾಟಕ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಚೆಲುವರಾಯಸ್ವಾಮಿ ಜೊತೆಯಾಗಿ ಕರಡಿಯಾ ವರೆಗೆ ನಡೆದುಬಂದರು.

ಪಾದಯಾತ್ರೆಯುದ್ದಕ್ಕೂ ಹಳ್ಳಿ ಹಳ್ಳಿಗಳಿಂದ ನೆರೆದಿದ್ದ ಜನರು, ಕಳಸ ಹೊತ್ತ ಮಹಿಳೆಯರು, ಮಕ್ಕಳು ಸೋನಿಯಾ ಗಾಂಧಿಯವರನ್ನ ಕಂಡು ಪುಳಕಿತಗೊಂಡು ಅವರೊಂದಿಗೆ ಹೆಜ್ಜೆ ಹಾಕಿದರು.

ಈ ಯಾತ್ರೆ ಇಡೀ ಕರ್ನಾಟಕದ ಜನರು ಒಗ್ಗೂಡಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ. ಶ್ರೀಮತಿ ಸೋನಿಯಾ ಗಾಂಧಿಯವರ ಈ ಪ್ರತಿ ಹೆಜ್ಜೆಗಳಲ್ಲೂ ದೃಢತೆ, ವಿಶ್ವಾಸ, ಛಲ, ಬದ್ಧತೆ, ಸ್ಪಷ್ಟತೆ, ವಾತ್ಸಲ್ಯ, ಕರುಣೆ, ತಾಯ್ತನದ ಮಮತೆ ಕಂಡು ನೆರೆದಿದ್ದ ಜನಸಾಗರ ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರು.

ಅವಮಾನಗಳನ್ನು ಸಹಿಸಿ ಕೇವಲ ಪ್ರೀತಿಯನ್ನ ಹಂಚುವ ತ್ಯಾಗಗುಣ ಹಾಗೂ ಸಹಾನುಭೂತಿಯನ್ನ ಈ #BharatJodoYatra ಹಳ್ಳಿ ಹಳ್ಳಿಗೂ ಇಂದಿನ ನಡಿಗೆ ಜೀವಂತ ಸಾಕ್ಷಿಯಾಗಿತ್ತು.

Edited By : Nirmala Aralikatti
PublicNext

PublicNext

06/10/2022 11:10 am

Cinque Terre

146.48 K

Cinque Terre

19

ಸಂಬಂಧಿತ ಸುದ್ದಿ