ಬೆಂಗಳೂರು: PayCM ಅಭಿಯಾನಕ್ಕೆ ಬಿಜೆಪಿ ಭರ್ಜರಿಯಾಗಿಯೇ ಟಕ್ಕರ್ ಕೊಟ್ಟಿದೆ. ಸಿದ್ದರಾಮಯ್ಯ ವಿರುದ್ಧ ಪೋಸ್ಟರ್ ರಿಲೀಸ್ ಮಾಡಿದೆ.
ಹೌದು ಕರ್ನಾಟಕ ಬಿಜೆಪಿ ಘಟಕವು ಟ್ವೀಟರ್ ನಲ್ಲಿ ಪಿಎಫ್ ಐ ಭಾಗ್ಯ ಹ್ಯಾಶ್ ಟ್ಯಾಗ್ ನೊಂದಿಗೆ `ಸಿದ್ರಾಮುಲ್ಲಮನ ಉಗ್ರಭಾಗ್ಯ ಲೀಲೆಗಳನ್ನು ತಿಳಿಯಲು ಕ್ಯೂಆರ್ಕೋಡ್ ಸ್ಕ್ಯಾನ್ ಮಾಡಿ ಎಂದು ಸಿದ್ದರಾಮಯ್ಯ ಅವರು ಪಿಎಫ್ಐ ಚಿನ್ಹೆ ಹಿಡಿದಿರುವಂತೆ ಪೋಸ್ಟರ್ ಬಿಡುಗಡೆ ಮಾಡಿದೆ.
ಇನ್ನು ಈ ಕ್ಯೂರ್ ಕೋಡ್ ಸ್ಕ್ಯಾನ್ ಮಾಡಿದರೆ ಪಿಎಫ್ ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ ಸುದ್ದಿಗಳಿರುವ ಪೇಜ್ ಕಾಣಿಸುತ್ತದೆ.
ಟ್ವೀಟ್ ನಲ್ಲಿ ಏನಿದೆ?
ಪಿಎಫ್ ಐ ಸ್ನೇಹಿತರು ಜೈಲಿಗೆ ಹೋದಾಗಿನಿಂದ ಸಿದ್ದರಾಮಯ್ಯ ಅವರು ಒಬ್ಬಂಟಿಯಾಗಿದ್ದಾರೆಯೇ? ಜಿಹಾದಿಗಳ ಜೊತೆ ಕಾಂಗ್ರೆಸ್ ಹೊಂದಿರುವ ಸಂಬಂಧ ತಿಳಿಯಲು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ. ಇತ್ತ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಪಿಎಫ್ ಐ ಜಿಹಾದಿಗಳನ್ನು ಸಂಬಂಧಿಗಳಂತೆ ಸಾಕುತ್ತಿದ್ದರೆ, ಅತ್ತ ಕಾಂಗ್ರೆಸ್ ಪಕ್ಷ ಕಾಶ್ಮೀರದ ಕಣಿವೆಯಲ್ಲಿ ಉಗ್ರರನ್ನು ಬೆಂಬಲಿಸುತ್ತಿತ್ತು. ಜಿಹಾದಿಗಳ ಜೊತೆ ಕಾಂಗ್ರೆಸ್ ಹೊಂದಿರುವ ನಂಟಿನ ಬಗ್ಗೆ ತಿಳಿಯಲು ಈ ಕೆಳಗಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ.
PublicNext
03/10/2022 10:31 pm