ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಜರಾತ್ ಹಾಗೂ ಹಿಮಾಚಲದಲ್ಲಿ ಕೇಸರಿ ಪಡೆ ಗೆಲ್ಲುತ್ತಾ?: ಸಮೀಕ್ಷೆ ಹೇಳೋದೇನು?

ನವದೆಹಲಿ: ಗುಜರಾತ್ ಹಾಗು ಹಿಮಾಚಲ ಪ್ರದೇಶದಲ್ಲಿ ಈಗ ವಿಧಾನಸಭೆ ಚುನಾವಣೆ ಕಾವು ಏರತೊಡಗಿದೆ. ಜತೆಗೆ ರಾಜಕೀಯ ಲೆಕ್ಕಾಚಾರಗಳೂ ಶುರುವಾಗಿವೆ. ಈ ಬಾರಿ ಗುಜರಾತ್ ರಾಜಕಾರಣಕ್ಕೆ ಆಮ್ ಆದ್ಮಿ ಪಕ್ಷ ಕಾಲಿರಿಸಿದೆ. ಹೀಗಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ‘ಗುಪ್ತಚರ ವರದಿ ಪ್ರಕಾರ ಗುಜರಾತಲ್ಲಿ ಗೆಲುವು ನಮ್ಮದೇ’ ಎಂದು ಕೇಜ್ರಿವಾಲ್‌ ಕೂಡ ಹೇಳಿಕೊಂಡಿದ್ದಾರೆ. ಇಂಥದ್ದರ ನಡುವೆಯೇ ಸಿ-ವೋಟರ್ ಸಮೀಕ್ಷೆ ಬಂದಿರುವುದು ಗಮನಾರ್ಹವಾಗಿದೆ.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ:

ಇನ್ನು ಹಿಮಾಚಲ ಪ್ರದೇಶದಲ್ಲಿ ಕೂಡ ಬಿಜೆಪಿ ಪುನಃ ಅಧಿಕಾರಕ್ಕೆ ಬರಲಿದೆ. ಅಲ್ಲಿ ಈಗ 47 ಸ್ಥಾನ ಹೊಂದಿರುವ ಬಿಜೆಪಿ 37ರಿಂದ 45, ಕಾಂಗ್ರೆಸ್‌ 21ರಿಂದ 29, ಆಪ್‌ 0-1 ಹಾಗೂ ಇತರರು 0-3 ಸ್ಥಾನ ಗಳಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಹಿಮಾಚಲದಲ್ಲಿ 68 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 35 ಸ್ಥಾನದ ಅವಶ್ಯಕತೆ ಇದೆ. ರಾಜ್ಯದಲ್ಲಿ 2017ರಲ್ಲಿ ಕಾಂಗ್ರೆಸ್ಸನ್ನು ಪದಚ್ಯುತಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.

ಗುಜರಾತ್‌ನಲ್ಲಿ ಸತತ 7ನೇ ಬಾರಿ ಕಮಲ:

ಗುಜರಾತ್‌ನಲ್ಲಿ ಕಳೆದ ಸಲ 99 ಸ್ಥಾನ ಗೆದ್ದಿದ್ದ ಬಿಜೆಪಿ ಈ ಸಲ ಭಾರಿ ಬಹುಮತ ಗಳಿಸಲಿದ್ದು 135ರಿಂದ 143 ಸ್ಥಾನ ಸಂಪಾದಿಸಲಿದೆ. ಕಾಂಗ್ರೆಸ್‌ 36ರಿಂದ 44, ಆಪ್‌ ಕೇವಲ 0-2 ಹಾಗೂ ಇತರರು 0-3 ಸ್ಥಾನ ಗಳಿಸಲಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ. ಗುಜರಾತ್‌ನಲ್ಲಿ 182 ವಿಧಾನಸಭೆ ಕ್ಷೇತ್ರಗಳಿವೆ. ಬಹುಮತಕ್ಕೆ 92 ಸ್ಥಾನಗಳು ಬೇಕು. ರಾಜ್ಯದಲ್ಲಿ 1998ರಿಂದ ಬಿಜೆಪಿ ಅಧಿಕಾರದಲ್ಲಿದೆ. ಈಗ ಗೆದ್ದರೆ ಸತತ 7ನೇ ಸಲ ಗೆದ್ದಂತಾಗುತ್ತದೆ.

ಹಿಮಾಚಲ ಪ್ರದೇಶ ಚುನಾವಣಾ ಪೂರ್ವ ಸಮೀಕ್ಷೆ ಹೀಗಿದೆ

ಒಟ್ಟು ಸ್ಥಾನ 68

ಬಹುಮತಕ್ಕೆ 35

ಬಿಜೆಪಿ 37-45

ಕಾಂಗ್ರೆಸ್‌ 21-29

ಆಪ್‌ 0-1

ಇತರರು 0-3

ಗುಜರಾತ್‌ ಚುನಾವಣಾ ಪೂರ್ವ ಸಮೀಕ್ಷೆ ಹೀಗಿದೆ

ಒಟ್ಟು ಸ್ಥಾನ 182

ಬಹುಮತಕ್ಕೆ 92

ಬಿಜೆಪಿ 135-143

ಕಾಂಗ್ರೆಸ್‌ 36-44

ಆಪ್‌ 0-2

ಇತರರು 0-3

Edited By : Nagaraj Tulugeri
PublicNext

PublicNext

03/10/2022 12:52 pm

Cinque Terre

35.92 K

Cinque Terre

7

ಸಂಬಂಧಿತ ಸುದ್ದಿ