ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಡವಾಯಿತ್ತೆಂದು ಮೈಕ್ ಇಲ್ಲದೆ ಭಾಷಣ ಮಾಡಿದ ಮೋದಿ : ವಿಡಿಯೋ ವೈರಲ್

ಜೈಪುರ: ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕವನ್ನು ಬಳಸಬಾರದು ಎನ್ನುವ ನಿಯಮವನ್ನು ಸ್ವತಹ ಪ್ರಧಾನಿ ಮೋದಿ ಪಾಲಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಹೌದು ರಾಜಸ್ಥಾನದ ಅಬು ರಸ್ತೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುವುದು ತಡವಾಗಿತ್ತು. ಈ ವೇಳೆ ಅವರು ತೆಗೆದುಕೊಂಡ ನಿರ್ಧಾರ ನಿಜಕ್ಕೂ ಗಮನ ಸೆಳೆದಿದೆ.

'ನಾನು ಇಲ್ಲಿಗೆ ತಲುಪಲು ತಡವಾಯಿತು. ಈಗಾಗಲೇ ರಾತ್ರಿ 10 ಗಂಟೆಯಾಗಿದೆ. ನಾನು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು ಎಂದು ನನ್ನ ಆತ್ಮಸಾಕ್ಷಿಯು ಹೇಳುತ್ತದೆ. ಹಾಗಾಗಿ ನಿಮ್ಮ ಮುಂದೆ ನಾನು ಕ್ಷಮೆಯಾಚಿಸುತ್ತೇನೆ' ಎಂದ ಪ್ರಧಾನಿ ಮೋದಿ ಮೈಕ್ ಮತ್ತು ಧ್ವನಿವರ್ಧಕವಿಲ್ಲದೆ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

Edited By : Nirmala Aralikatti
PublicNext

PublicNext

01/10/2022 10:58 am

Cinque Terre

129.07 K

Cinque Terre

33

ಸಂಬಂಧಿತ ಸುದ್ದಿ