ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೋಸ್ಟರ್ ಫೈಟ್ : MLC ರವಿಕುಮಾರ್ ಕೆಂಡಾಮಂಡಲ

ಬೆಂಗಳೂರು : ಬೆಂಗಳೂರಿನ ಹಲವೆಡೆ ಪೇ ಸಿಎಂ ಪೋಸ್ಟರ್ ಅಂಟಿಸಲಾಗಿದೆ. ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪದ ಪ್ರಚಾರ ಮಾಡುತ್ತಿದೆ. ಸದ್ಯ ಕಾಂಗ್ರೆಸ್ ಪೇ-ಸಿಎಂ ಪೋಸ್ಟರ್ ಅಂಟಿಸುವ ಮೂಲಕ ವಿನೂತನ ಅಭಿಯಾನ ಶುರು ಮಾಡಿದೆ.

ಈಗಾಗಲೇ ಆನ್ ಲೈನ್ ಪೇಮೆಂಟ್ ಗೆ ಪೇಟಿಎಂ ಮೊಬೈಲ್ ಅಪ್ಲಿಕೇಷನ್ ರೀತಿಯಲ್ಲಿ ಕಾಂಗ್ರೆಸ್ ಪೇ ಸಿಎಂ ಅಭಿಯಾನ ಶುರುವಾಗಿದೆ. ಅದರಲ್ಲಿ ಕ್ಯೂ ಆರ್ ಕೋಡ್ ಮುದ್ರಿಸಿ ಅದರ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಫೋಟೋ ಅಂಟಿಸಲಾಗಿದೆ.

ಈ ವಿಚಾರಕ್ಕಗಿ ಇದೀಗ ಕಾಂಗ್ರೆಸ್ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ವಿಧಾನಪರಿಷತ್ ಸದಸ್ಯ ಎನ್ .ರವಿಕುಮಾರ್ ಪ್ರತಿಕ್ರಿಯೆ ನೀಡಿ, ರಾಹುಲ್ ಗಾಂಧಿ ಭಾರತ್ ಜೋಡೋ ಮಾಡುತ್ತಾ ಇದ್ದಾರೆ. ಮೊದಲು ಅವರಿಗೆ ಪೇ ಮಾಡಲಿ. ಸಿದ್ದರಾಮಯ್ಯ ಕಾರು, ವಾಚ್ ಬೇಕು ಅವರಿಗೆ ಪೇ ಮಾಡಲಿ. ರಮೇಶ್ ಕುಮಾರ್ ನೂರು ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.

ಘನತೆ ಇಟ್ಟುಕೊಂಡು ಸಿಎಂ ವಿರುದ್ಧ ಟೀಕೆ ಮಾಡಬೇಕು ಎಂದು ರವಿಕುಮಾರ್ ಗರಂ ಆಗಿದ್ದಾರೆ. ಭ್ರಷ್ಟಾಚಾರ ಎಂಬ ಪದ ಕಾಂಗ್ರೆಸ್ ನಿಂದ ಹುಟ್ಟಿದೆ. ಕಾಂಗ್ರೆಸ್ ಇರುವವರಿಗೆ ಭ್ರಷ್ಟಾಚಾರ ನಿಲ್ಲುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Edited By : Nirmala Aralikatti
PublicNext

PublicNext

21/09/2022 03:22 pm

Cinque Terre

44.18 K

Cinque Terre

5

ಸಂಬಂಧಿತ ಸುದ್ದಿ