ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಕಳ್ಳರ ಸರದಾರ ಎಂದ ಬಿಹಾರ ಸಚಿವ, ಸರ್ಕಾರದಲ್ಲಿ ಇನ್ನೂ ದೊಡ್ಡ ಕಳ್ಳರಿದ್ದಾರಂತೆ; ವಿವಾದಕ್ಕೀಡಾದ ಹೇಳಿಕೆ

ಪಾಟ್ನಾ: ಬಿಹಾರದಲ್ಲಿ ಇತ್ತೀಚಿಗಷ್ಟೇ ರಚನೆಯಾದ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ನೇತೃತ್ವದ ಸರ್ಕಾರದ ಸಚಿವರೋರ್ವರು ತಮ್ಮ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಕೃಷಿ ಸಚಿವ ಸುಧಾಕರ್ ಸಿಂಗ್ ಅವರು ತಮ್ಮ ಇಲಾಖೆಯಲ್ಲಿ ಅನೇಕ ಕಳ್ಳರು ಇದ್ದಾರೆ ಎಂದು ಆರೋಪ ಮಾಡಿದ್ದಾರೆ.

ಅಲ್ಲದೇ ಆ ಕಳ್ಳರ ಸರದಾರ ತಾನೇ ಎಂದಿರುವ ಅವರು, ತನಗಿಂತಲೂ ಮೇಲೆ ಸರ್ಕಾರದಲ್ಲಿ ದೊಡ್ಡ ದೊಡ್ಡ ಸರದಾರರು ಇರುವುದಾಗಿಯೂ ಹೇಳಿದ್ದಾರೆ. ಈ ಹೇಳಿಕೆ ಸದ್ಯ ಬಿಹಾರ ರಾಜಕೀಯದಲ್ಲಿ ವಿವಾದವನ್ನೇ ಸೃಷ್ಟಿಸಿದೆ. ಬಿಹಾರದ ಕೈಮೂರ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೃಷಿ ಸಚಿವ ಸುಧಾಕರ್ ಸಿಂಗ್, ನಿತೀಶ್ ಕುಮಾರ್ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೃಷಿ ಇಲಾಖೆ ಮಾತ್ರವಲ್ಲ, ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲೂ ಕಳ್ಳರು ಇದ್ದಾರೆ. ಕಳ್ಳತನ ಮಾಡಿದವರ ಪೈಕಿ ನಮ್ಮ ಕೃಷಿ ಇಲಾಖೆ ಒಂದೇ ಇಲ್ಲ. ಇತರ ಇಲಾಖೆಗಳೂ ಇವೆ. ನಾನು ಕೃಷಿ ಇಲಾಖೆ ಸಚಿವ ಆಗಿರುವುದಕ್ಕೆ ನಾನು ಈ ಕಳ್ಳರ ಸರದಾರ ಎಂದು ಅವರು ವ್ಯಾಖ್ಯಾನಿಸಿದ್ದಾರೆ. ಸರ್ಕಾವೇನೋ ಬದಲಾಗಿದೆ.

ಆದರೆ ಅವರ ಕಾರ್ಯಶೈಲಿ ಮುಂಚೆ ಹೇಗಿತ್ತೋ, ಈಗಲೂ ಹಾಗೇ ಇದೆ ಎಂದು ಸಹ ಕೃಷಿ ಸಚಿವ ಸುಧಾಕರ್ ಸಿಂಗ್ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

Edited By : Abhishek Kamoji
PublicNext

PublicNext

13/09/2022 02:56 pm

Cinque Terre

47.97 K

Cinque Terre

17

ಸಂಬಂಧಿತ ಸುದ್ದಿ