ಗಾಂಧಿನಗರ: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗುಜರಾತ್‌ನಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ನಿನ್ನೆ (ಸೋಮವಾರ) ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಆಟೋ ರಿಕ್ಷಾ ಚಾಲಕರೊಬ್ಬರ ಮನೆಯಲ್ಲಿ ಅರವಿಂದ್ ಕೇಜ್ರಿವಾಲ್ ರಾತ್ರಿ ಊಟ ಮಾಡಿದರು.
ಇದಕ್ಕೂ ಮುನ್ನ ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಆಟೋ ಚಾಲಕನ ಮನೆಗೆ ಭೇಟಿ ನೀಡದಂತೆ ಕೇಜ್ರಿವಾಲ್ ಅವರನ್ನು ಗುಜರಾತ್ ಪೊಲೀಸರು ತಡೆದಿದ್ದರು. ಈ ವೇಳೆ ಗರಂ ಆದ ಕೇಜ್ರಿವಾಲ್, "ನಮಗೆ ನಿಮ್ಮ ಭದ್ರತೆ ಬೇಡ. ನೀವು ನಮ್ಮನ್ನು ಒತ್ತೆಯಾಳಾಗಿ ಇರಿಸಿದ್ದೀರಿ. ಮೇಲಿರುವ ದೇವರು ನಮ್ಮನ್ನು ರಕ್ಷಣೆ ಮಾಡುತ್ತಾನೆ. ನೀವು ರಕ್ಷಣೆ ಕೊಡಲು ಬಂದಿಲ್ಲ. ನನ್ನನ್ನು ಬಂಧಿಸಲು ಬಂದಿದ್ದೀರಿ" ಎಂದು ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದರು.
PublicNext
13/09/2022 09:22 am