ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯರನ್ನ ಮೈಸೂರಲ್ಲಿ ಜನ ಕಚ್ಚೆ ಹರಕ ಅಂತಾರೆ: ಸಿಟಿ ರವಿ ವಿವಾದಾತ್ಮಕ ಹೇಳಿಕೆ

ಚಿಕ್ಕಮಗಳೂರು: ಮೈಸೂರು ಭಾಗದಲ್ಲಿ ಸಿದ್ದರಾಮಯ್ಯರನ್ನ ಕಚ್ಚೆ ಹರುಕ ಅನ್ನುತ್ತಾರೆ. ನಾನೂ ಹೇಳಬಹುದಲ್ವಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಚಿಕ್ಕಮಂಗಳೂರು ತಾಲೂಕಿನ ಮುಳ್ಳಯ್ಯನಗಿರಿ ಸಮೀಪದ ಕವಿಕಲ್‌ಗಂಡಿ ಬಳಿ ಮಾತನಾಡಿದ ಅವರು, 'ಸಿ.ಟಿ.ರವಿ ಲೂಟಿ ರವಿ' ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಮೈಸೂರಿನಲ್ಲಿ ಜನ ಸಿದ್ದರಾಮಯ್ಯನರನ್ನ ಕಚ್ಚೆ ಹರಕ ಅನ್ನುತ್ತಾರೆ. ಈ ಮಾತು ನನ್ನದ್ದಲ್ಲ, ಮೈಸೂರಿನ ಜನರದ್ದು. ಮೈಸೂರಿನ ಜನ ಹೀಗೆ ಮಾತನಾಡುತ್ತಾರೆ ಎಂದು ನಾನು ಆ ರೀತಿ ಹೇಳಬಹುದಲ್ವಾ? ನಾನು ಆ ರೀತಿ ಹೇಳಿದರೆ ಮರ್ಯಾದೆ ಹೋಗುವುದು ಅವರದ್ದೇ" ಎಂದು ವಾಗ್ದಾಳಿ ನಡೆಸಿದ್ದಾರೆ.

ಜನ ನನ್ನನ್ನ 4 ಬಾರಿ ಪ್ರೀತಿಯಿಂದ ಚುನಾವಣೆಯಿಂದ ಚುನಾವಣೆಗೆ ಹೆಚ್ಚಿನ ಲೀಡ್‌ನಲ್ಲಿ ಗೆಲ್ಲಿಸಿದ್ದಾರೆ. ಜವಾಬ್ದಾರಿಯಲ್ಲಿ ಇರುವ ವ್ಯಕ್ತಿ ಜವಾಬ್ದಾರಿಯಿಂದ ಮಾತನಾಡಬೇಕು. ಸಿದ್ದರಾಮಯ್ಯ ಶಾಸಕರಾಗಿದ್ದಾಗ, ಆಗದೇ ಇದ್ದಾಗ ಹೇಗಿದ್ರು ಅಂತ ಬಿಚ್ಚಿಡಲು ನನಗೂ ಬರುತ್ತೆ. ನನ್ನದಲ್ಲ, ಜನ ಮಾತನಾಡುತ್ತಾರೆ ಅಂದರೆ ಅವರ ಬಾಯಲ್ಲಿ ಬಂದಾಗ ಅದು ಅವರ ಮಾತಾಗುತ್ತೆ. ಸಿ.ಟಿ.ರವಿ ಬಾಯಲ್ಲಿ ಬಂದಾಗ ಸಿ.ಟಿ.ರವಿ ಮಾತಾಗುತ್ತೆ ಎಂದು ಕುಟುಕಿದ್ದಾರೆ.

Edited By : Vijay Kumar
PublicNext

PublicNext

13/09/2022 08:31 am

Cinque Terre

41.49 K

Cinque Terre

28

ಸಂಬಂಧಿತ ಸುದ್ದಿ