41 ಸಾವಿರ ರೂಪಾಯಿ ಟಿ-ಶರ್ಟ್ ಧರಿಸಿ ರಾಹುಲ್ ಯಾತ್ರೆ ಆರಂಭಿಸಿದಕ್ಕೆ ಬಿಜೆಪಿ ಟೀಕಾಪ್ರಹಾರ ಮಾಡಿದೆ.ಜನಸಾಮಾನ್ಯರು ಕಷ್ಟದಲ್ಲಿರುವ ವೇಳೆ ನಾಯಕರು ದುಬಾರಿ ಬಟ್ಟೆ ತೊಟ್ಟು ಕಾಣಿಸಿಕೊಂಡಿರುವ ಸಾಕಷ್ಟು ಘಟನೆಗಳು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು, ಕೆಲ ರಾಜ್ಯದ ಮುಖ್ಯಮಂತ್ರಿಗಳೂ ಇದರಿಂದ ಹೊರತಾಗಿಲ್ಲ.
ಈಗ ಭಾರತ್ ಜೋಡೋ ಯಾತ್ರೆಯಲ್ಲಿ ತೊಡಗಿಕೊಂಡಿರುವ ರಾಹುಲ್ ಗಾಂಧಿ ಧರಿಸಿರುವ ಟಿ-ಶರ್ಟ್ ಬಗ್ಗೆ ಬಿಜೆಪಿ ರಾಜಕೀಯ ಆರಂಭಿಸಿದೆ.41,000 ಸಾವಿರಕ್ಕೂ ಹೆಚ್ಚು ಬೆಲೆಯ ಬುರ್ಬೆರಿ ಟಿ-ಶರ್ಟ್ ಧರಿಸಿ ಭಾರತ್ ಜೋಡೋ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ ರಾಹುಲ್ ಫೋಟೋ ಹಂಚಿಕೊಂಡಿದ್ದಾರೆ.
‘ಭಾರತ್ ದೇಖೋ’ ಎಂಬ ಶೀರ್ಷಿಕೆಯೊಂದಿಗೆ ಟಿ-ಶರ್ಟ್ ಬೆಲೆಯನ್ನು ಅದರ ಪಕ್ಕದಲ್ಲೇ ಪೋಸ್ಟ್ ಮಾಡಿದೆ. ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ. ಪ್ರಧಾನಿ ಮೋದಿಯವರ ಸೂಟ್ ಬೆಲೆ ₹10 ಲಕ್’ ಎಂದು ಟೀಕಿಸಿದೆ.
PublicNext
09/09/2022 05:50 pm