ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಹಿತಿ ಬರಗೂರು ರಾಮಚಂದ್ರಪ್ಪ ವಿರುದ್ದ ಗಂಗಾಮತಸ್ಥ ಸಮಾಜದಿಂದ ಪ್ರತಿಭಟನೆ

ತುಮಕೂರು : ಗಂಗಾಮತ ಬೆಸ್ತರ ಕುಲದೇವತೆಯಾದ ಗಂಗಾಮಾತೆಯನ್ನು ಕೇಳಲಾಗದ ಭಾಷೆಯಲ್ಲಿ ಬರೆದು ಅವಮಾನ ಮಾಡಿರುವುದು ಸಮಾಜಕ್ಕೆ ನೋವನ್ನು ಉಂಟುಮಾಡಿರುತ್ತಾರೆಂದೂ ಅವರ 'ಭರತ ನಗರಿ' ಕಾದಂಬರಿಯನ್ನು ಮತ್ತು ಮುದ್ರಿಸಿರುವ ಪ್ರತಿಗಳನ್ನು ಸರ್ಕಾರ ಮುಟ್ಟುಗೋಲು ಮಾಡಲು ಒತ್ತಾಯಿಸಿ ತುಮಕೂರು ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಛೇರಿ ತಲುಪಿ ಮನವಿ ಸಲ್ಲಿಸಲಾಯಿತು.

ಇದೆ ಸಂದರ್ಭದಲ್ಲಿ ಕಲ್ಲೂರು ಗಂಗಾಮತ ಕ್ಷೇಮಾಭಿವೃದ್ಧಿ ಅಧ್ಯಕ್ಷರಾದ ಕೆ. ಟಿ ಸೋಮಶೇಖರ್ ಮಾತನಾಡಿ ಬರಗೂರು ರಾಮಚಂದ್ರಪ್ಪನವರು ನಮ್ಮ ತುಮಕೂರು ಜಿಲ್ಲೆಯ ಕೀರ್ತಿಯನ್ನೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಸ್ಥಾನ ಮಾನ ಪಡೆದ ವ್ಯಕ್ತಿ ಇವರ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆದರೆ ಇವರು ಬರೆದ 'ಭರತ ನಗರಿ' ಕಾದಂಬರಿಯಲ್ಲಿ ಗಂಗೆಯನ್ನು ಅವಮಾನಿಸಿರುವುದನ್ನು ಖಂಡಿಸುತ್ತೇವೆ ವಿರೋಧಿಸುತ್ತೇವೆ ಬರಗೂರು ರಾಮಚಂದ್ರಪ್ಪ ನವರ ಬಗ್ಗೆ ಅಪಾರ ಗೌರವವಿದೆ ಎಂದರು.

ಮುಖಂಡ ಕರಿಯಪ್ಪ ಕೃಷ್ಣಪ್ಪ, ಶ್ರೀನಿವಾಸ್ ತುರುವೇಕೆರೆ ತಾಲ್ಲೂಕು ಅಧ್ಯಕ್ಷರಾದ ಪಾಂಡುರಂಗ ಉಪಾನ್ಯಸಕ ಚಂದ್ರಪ್ಪ, ಶಶಿಕುಮಾರ್ ಸೋಮಶಂಖರ್ ಯುವ ಸಾಹಿತಿ ಕಿರುಚಿತ್ರ ನಿರ್ದೇಶಕ ಅರುಣ್ ಕುಮಾರ್ ಸದಾಶಿವ ಹಾಗೂ ಸಮಾಜದವರು ಭಾಗವಹಿಸಿದ್ದರು.

Edited By : Nagesh Gaonkar
PublicNext

PublicNext

07/09/2022 10:19 pm

Cinque Terre

40.55 K

Cinque Terre

0

ಸಂಬಂಧಿತ ಸುದ್ದಿ