ಬೆಳಗಾವಿ: ದಿವಂಗತ ಸಚಿವ ಉಮೇಶ ಕತ್ತೆಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಬಂದಿರುವ ಸಿಎಂ ಬೊಮ್ಮಾಯಿ ಸಾಂಬ್ರಾ ಏರ್ಪೊರ್ಟನಲ್ಲಿ ಭಾರವಾದ ಹೃದಯದಿಂದ ಬೆಳಗಾವಿಗೆ ಬಂದಿದ್ದೇನೆ. ಕತ್ತಿ ಅವರು ಒಬ್ಬ ಧೀಮಂತ ರಾಜಕಾರಣಿ. ಅವರ ಅಗಲಿಕೆ ಮನಸ್ಸನ್ನು ಘಾಸಿ ಮಾಡಿದೆ ಎಂದರು.
ಅವರ ನಿಧನದ ಕಾರಣ ರಾಜ್ಯದಲ್ಲಿ ಮೂರುದಿನಗಳ ಕಾಲ ಶೋಕಾಚರಣೆ ಮಾಡಲು ಸರಕಾರ ನಿರ್ಧಾರ ಮಾಡಿದೆ. ಹೀಗಾಗಿ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಯಾವುದೇ ಸರಕಾರಿ ಕಾರ್ಯಕ್ರಮಗಳು ಇರುವುದಿಲ್ಲ. ಇದರ ಜೊತೆ ಬಿಜೆಪಿ ಜನೋತ್ಸವ ಕಾರ್ಯಕ್ರಮವು ಮುಂದೂಡಲಾಗಿದೆ ಎಂದು ಸ್ಪಷ್ಟ ಪಡಿಸಿದರು.
ಸದ್ಯ ನಾನು ಕೂಡಾ ಕತ್ತಿ ಅವರ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಲು ಬೆಲ್ಲದ ಬಾಗೇವಾಡಿಗೆ ಹೋಗುತ್ತಿದ್ದೇನೆ. ಸರಕಾರದಿಂದ ಅಂತ್ಯಕ್ರಿಯೆಗೆ ಎಲ್ಲ ವ್ಯವಸ್ಥೆ ಮಾಡಿದೆ. ಸಾರ್ವಜನಿಕರು ಕೂಡಾ ಅಂತ್ಯಕ್ರಿಯೆ ವೇಳೆ ಶಾಂತಿ ಕಾಪಡಲು ಸಿಎಂ ಮನವಿ ಮಾಡಿದರು.
PublicNext
07/09/2022 05:20 pm