ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ತವರಿನತ್ತ ಉಮೇಶ ಕತ್ತಿ ಪಾರ್ಥಿವ ಶರೀರ

ಬೆಳಗಾವಿ: ಬೆಂಗಳೂರಿನಿಂದ ಸಚಿವ ಉಮೇಶ ಮಧ್ಯಾಹ್ನ ಬೆಳಗಾವಿ ಸಾಂಬ್ರಾ ಏರ್‌ಪೋರ್ಟ್‌ಗೆ ತಲುಪಿತು. ಸಾವಿರಾರು ಅಭಿಮಾನಿಗಳ ಮತ್ತು ಅನೇಕ ರಾಜಕೀಯ ಮುಖಂಡರು ಅಂತಿ ದರ್ಶನ ಪಡೆದರು. ಈ ವೇಳೆ ಅನೇಕ ಅವರ ಪಾರ್ಥಿವ ಶರೀರವನ್ನು ಕಂಡು ಅಭಿಮಾನಿಗಳ ದುಃಖದ ಕಟ್ಟೆ ಒಡೆದು ಹೋಯಿತು. ಸಾಕಷ್ಟು ಜನಸಾಗರವೇ ಎರ್ ಪೊರ್ಟ ನಲ್ಲಿ ನೆರೆದಿದ್ದರಿಂದ ಜನರನ್ನು ನಿಯಂತ್ರಸಿಲು ಪೊಲೀಸ್ ಹರಸಾಹಸಪಟ್ಟರು. ಬಳಿಕ ಅಲ್ಲಿಯೇ ನೆರದಿದ್ದ ಅನೇಕ ರಾಜ್ಯದ ನಾನ ಭಾಗದ ಮಠಾಧೀಶರು ಮಂತ್ರ ಪಟನ ಮಾಡಿ ಕತ್ತಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಸಿದರು.

ನಂತರ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿದ್ದ ಆರ್ಮಿ ತೆರದ ವಾಹನದಲ್ಲಿ ಬೆಳಗಾವಿಯಿಂದ ಅವರ ಸಚಿವರ ತವರೂರಾದ ಬೆಲ್ಲದ ಬಾಗೇವಾಡಿ ಗೆ ರವಾನಿಸಿದರು. ಈ ವೇಳೆ ಕುಟುಂಬಸ್ಥರು ಸೇರಿದಂತೆ ಅವರ ಅಭಿಮಾನಿಗಳು ಆಕ್ರಂದನ ಮುಗಿಲು ಮುಟ್ಟಿತ್ತು.

ಈ ವೇಳೆ ಜಿಲ್ಲೆಯ ಬೆಳಗಾವಿ ಶಾಸಕರಾದ ಅನಿಲ ಬೆನಕೆ, ಯಾದವಾಡ, ದೊಡ್ಡ ಹೌಸ್‌, ಐಯೋಳಿ, ಪ್ರಭಾಕರ ಕೋರೆ, ಬಸವರಾಜ್ ಹೊರಟ್ಟಿ, ಪ್ರಕಾಶ ಹುಕ್ಕೇರಿ ಗಣೇಶ ಹುಕ್ಕೇರಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಮಾಲೆ ಹಾಕಿ ಸಂತಾಪ ಸೂಚಿಸಿದರು.

Edited By : Manjunath H D
PublicNext

PublicNext

07/09/2022 04:40 pm

Cinque Terre

69.37 K

Cinque Terre

8