ಬೆಳಗಾವಿ: ಉಮೇಶ ಕತ್ತಿ ಅವರ ಮಾತು ನಿಷ್ಠುರವಾದರೂ ಹೃದಯ ಬಹಳ ವಿಶಾಲವಾಗಿತ್ತು. ಅವರ ಅಗಲಿಕೆಯಿಂದ ಅಪಾರವಾದ ಹಾನಿಯಾಗಿದೆ ಎಂದು ಬೆಳಗಾವಿಯ ಕಾರಜಿಮಠದ ಗುರುಸಿದ್ದ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸ್ವಾಮೀಜಿ ಸಚಿವ ಉಮೇಶ ಕತ್ತಿ ಸರಕಾರದಲ್ಲಿ ಸಚಿವರಾಗಿದ್ದರೂ ಜನ ಸಾಮಾನ್ಯರೊಂದಿಗೆ ಸಾಕಷ್ಟು ಬೆರೆಯುತ್ತಿದ್ದರು. ಬಡವರ, ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರ ಅಗಲಿಕೆಯಿಂದ ಅಪಾರ ಹಾನಿಯಾಗಿದೆ ಎಂದರು.
PublicNext
07/09/2022 01:15 pm