ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧುಗಿರಿ : ಚೆನ್ನ ಸಾಗರ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಡಿಸಿಎಂ..!

ಮಧುಗಿರಿ : ಮಾಜಿ ಉಪ ಮುಖ್ಯ ಮಂತ್ರಿಗಳು ಮತ್ತು ಶಾಸಕ ಡಾ.ಜಿ. ಪರಮೇಶ್ವರ್ ಸೋಮುವಾರ ತೀವ್ರ ಮಳೆಯಿಂದ ಜಯಮಂಗಲಿ ನದಿ ಉಕ್ಕಿ ಹರಿದು ಜಲಾವೃತ ಗೊಂಡಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮಧುಗಿರಿ ತಾಲೂಕು ಚನ್ನಸಾಗರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅತೀವೃಷ್ಟಿಯಿಂದ ತೊಂದರೆಗೊಳಗಾಗಿರುವ ಕುಟುಂಬಗಳನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿ ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುನ್ಸೂ ಚನೆ ಇದ್ದು ಪರಿಸ್ಥಿಯನ್ನು ತೀವ್ರ ಕಟ್ಟೆಚ್ಚರದಿಂದ ನಿಭಾಯಿಸ ಬೇಕಾಗಿದ್ದು ಯಾವುದೇ ಕ್ಷಣದಲ್ಲಿಯೂ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿ ಅಧಿಕಾರಿಗಳಿಗೆ ಸ್ಥಳದಲ್ಲೇ ಇದ್ದು ಪರಿಸ್ಥಿತಿಯನ್ನು ನಿಭಾಯಿಸುವಂತೆ ಸೂಚನೆ ನೀಡಿ ಹೆಚ್ಚು ತೊಂದರೆ ಯಾಗದಂತೆ ನೋಡಿಕೊಳ್ಳ ಬೇಕೆಂದು ಸೂಚನೆ ನೀಡಿ ತುರ್ತು ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಶಾಸಕರ ಭೇಟಿ ಸಂದರ್ಭದಲ್ಲಿ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಅವಲತ್ತುಕೊಂಡರು, ಕಳೆದ 15 ದಿನದಲ್ಲಿ ಎರಡನೇ ಬಾರಿ ಗ್ರಾಮ ಜಲಾವೃತವಾಗಿದ್ದು ಗ್ರಾಮಸ್ಥರ ಬದುಕು ಚಿಂತಾಜನಕವಾಗಿದೆ.

Edited By : Nirmala Aralikatti
PublicNext

PublicNext

05/09/2022 10:02 pm

Cinque Terre

25.71 K

Cinque Terre

0

ಸಂಬಂಧಿತ ಸುದ್ದಿ