ಬೆಂಗಳೂರು: ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆ ಮೇಲೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ದರ್ಪ ತೋರಿದ್ದಲ್ಲದೇ ಆಕೆಗೆ ಆವಾಜ್ ಹಾಕಿದ್ದಾರೆ.ಮನವಿ ಪತ್ರದೊಂದಿಗೆ ಮಹಿಳೆ ಶಾಸಕರಿಗೆ ಸಮಸ್ಯೆಯನ್ನು ತಿಳಿಸಲು ಬಂದಿದ್ದರು. ಈ ವೇಳೆ ಶಾಸಕರು ಮಹಿಳೆ ಕೈಯಿಂದ ಪತ್ರ ಕಸಿದುಕೊಂಡು ‘ ನಿನಗೆ ನಾಚಿಕೆ ಮಾನ ಮರ್ಯಾದೆ ಇದೆಯಾ ಎಂದು ಆವಾಜ್ ಹಾಕಿದ್ದಾರೆ.ಸದ್ಯ ಶಾಸಕರು ಹಾಕಿದ ಆವಾಜ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಶಾಸಕರ ನಡೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಹೌದು ಶಾಸಕರು ಗುರುವಾರ ವರ್ತೂರು ಕೆರೆ ಕೋಡಿ ವೀಕ್ಷಣೆ ಮಾಡಲು ತೆರಳಿದ ವೇಳೆ ಘಟನೆ ನಡೆದಿದೆ. ಅಧಿಕಾರಿಗಳ ಜೊತೆ ಮಳೆ ಹಾನಿ ಪ್ರದೇಶ ವೀಕ್ಷಣೆಗೆ ತೆರಳಿದ್ದ ಶಾಸಕ ಅರವಿಂದ್ ಲಿಂಬಾವಳಿಯಿಂದ ಅಮಾಯಕ ಮಹಿಳೆ ಮೇಲೆ ದರ್ಪ ಮೆರೆದಿದ್ದಾರೆ.
ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯನ್ನು ನೋಡಿದ ಕೂಡಲೇ ಗರಂ ಆದ ಶಾಸಕರು, ನಿಂಗೆ ಮಾನ ಮರ್ಯಾದೆ ಇದೀಯಾ? ನಾಚಿಕೆ ಅಗಲ್ವಾ ನಿಂಗೆ? ನಿಂಗೆ ಮರ್ಯಾದೆ ಬೇರೆ ಕೊಡಬೇಕಾ? ಏಯ್ ಆಕೆಯನ್ನು ಸ್ಟೇಷನ್ ಗೆ ಕರೆದುಕೊಂಡು ಹೋಗಿ ಕೂರಿಸಿ.. ಏಯ್ ಎತ್ತಿಕೊಂಡು ಹೋಗೋ ಅವಳನ್ನ, ಹೇ ಬಾಯಿ ಮುಚ್ಚು, ಹೇ ಬಾಯಿ ಮುಚ್ಚು.. ಒದ್ದು ಒಳಗೆ ಹಾಕ್ತೀನಿ ಅಂತಾ ಏಕವಚನದಲ್ಲಿ ನಿಂದಿಸಿದ್ದಾರೆ.
ಶಾಸಕರು ಸೂಚನೆ ನೀಡುತ್ತಿದ್ದಂತೆ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಗಂಟೆಗಟ್ಟಲೇ ಠಾಣೆಯಲ್ಲೇ ಕೂರಿಸಿ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.
PublicNext
03/09/2022 10:51 am