ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅಪ್ರಾಪ್ತೆ ಕೈಗೆ ಮಗು ಕೊಟ್ಟ- ಪಾಪಿಯ ಕೃತ್ಯಕ್ಕೆ ಕಸದ ತೊಟ್ಟಿಗೆ ಬಿದ್ದ ಕಂದಮ್ಮ.!

ಬೆಳಗಾವಿ: ಖಾನಾಪುರ ತಾಲೂಕಿನ ನೇರ್ಸಾ-ಗವಳಿವಾಡದಲ್ಲಿ ಆರು ದಿನಗಳ ಹಿಂದೆ ಪತ್ತೆಯಾದ ಅನಾಥ ಶಿಶು ಪ್ರಕರಣ ಇದೀಗ ಬೇರೆ ತಿರುವು ಪಡೆದುಕೊಂಡಿದೆ.

ಹೌದು. ಕೆಲ ದಿನಗಳ ಹಿಂದೆ, ಸ್ಥಳೀಯ ಯುವಕನೋರ್ವ ಅಪ್ರಾಪ್ತ ಬಾಲಕಿಗೆ ಪುಸಲಾಯಿಸಿ ಮದುವೆ ಆಮಿಷ ಒಡ್ಡಿ ದೈಹಿಕ ಸಂಬಂಧ ಬೆಳೆಸಿ ಹುಟ್ಟಿದ ಮಗುವನ್ನು ಕಸದ ತೊಟ್ಟೆಯಲ್ಲಿ ಬಿಸಾಕಿ ಹೋಗಿದ್ದು ಪೊಲೀಸ್ ತನಿಖೆಯಲ್ಲಿ ಈಗ ಗೊತ್ತಾಗಿದೆ. ಈ ಪ್ರಕರಣ ಬೆನ್ನತ್ತಿದ್ದ ಖಾನಾಪುರ ಪೊಲೀಸರು ಮಲು ಅಪ್ಪು ಪಿಂಗಳೆ (19) ಗವಳಿವಾಡ-ನೆರ್ಸಾ ಎಂಬ ಯುವಕನನ್ನು ಬಂಧಿಸಿದ್ದಾರೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಯುವಕನಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಆತನ ವಿರುದ್ಧ ಮಕ್ಕಳ ಲೈಂಗಿಕ ಶೋಷಣೆ ತಡೆ ಕಾಯ್ದೆ 2012ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 25 ರಂದು ಬೆಳಿಗ್ಗೆ ನೆರ್ಸಾ-ಗವಳಿವಾಡದಲ್ಲಿ ಒಂದು ದಿನದ ಗಂಡು ಶಿಶುವು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿತ್ತು.

Edited By : Vijay Kumar
PublicNext

PublicNext

02/09/2022 02:31 pm

Cinque Terre

23.52 K

Cinque Terre

1

ಸಂಬಂಧಿತ ಸುದ್ದಿ