ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಗುಲಾಂ ನಬಿ ಆಜಾದ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯನ್ನು ಒರಟು ಮನುಷ್ಯ ಎಂದು ನಾನು ಭಾವಿಸಿದ್ದೆ. ಆದರೆ ಅವರು ಮಾನವೀಯತೆಯನ್ನು ತೋರಿಸಿದ್ದಾರೆ ಎಂದು ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಗುಲಾಂ ನಬಿ ಆಜಾದ್ ಅವರಿಗೆ ಸಂಸತ್ತಿನಲ್ಲಿ ಬೀಳ್ಕೊಡುಗೆ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಈ ಬಗ್ಗೆ ಮಾತನಾಡಿದ ಹಿರಿಯ ನಾಯಕ ಗುಲಾಂ ನಬಿ ಆಜಾದ್, ಪ್ರಧಾನಿ ಮೋದಿ ಅವರು ಮದುವೆಯಾಗಿಲ್ಲ, ಮಕ್ಕಳನ್ನು ಹೊಂದಿಲ್ಲ. ಹೀಗಾಗಿ ಅವರನ್ನು ಒರಟು ಮನುಷ್ಯ ಅಂತ ಭಾವಿಸಿದ್ದೆ. ಆದರೆ ಅವರು ಮಾನವೀಯತೆಯನ್ನು ತೋರಿಸಿದ್ದಾರೆ. ಅವರು ಗುಜರಾತ್‌ಗೆ ಹಾಗೂ ನಾನು ಜಮ್ಮು-ಕಾಶ್ಮೀರಕ್ಕೆ ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿಗೆ ಕಾಶ್ಮೀರಕ್ಕೆ ಬಂದಿದ್ದ ಗುಜರಾತ್‌ನ ಪ್ರವಾಸಿ ಬಸ್‌ ಮೇಲೆ ದಾಳಿ ನಡೆದಿತ್ತು. ಆಗ ಗುಜರಾತ್‌ ಸಿಎಂ ಆಗಿದ್ದ ಮೋದಿ ಅವರು ನನ್ನ ಕಚೇರಿಗೆ ಕರೆ ಮಾಡಿದ್ದರು. ಅವರು ಅಳುತ್ತಿದ್ದ ಧ್ವನಿ ನನಗೆ ಕೇಳಿತು ಎಂದು ಹೇಳಿದ್ದಾರೆ.

ಇನ್ನು ನನ್ನ ರಾಜೀನಾಮೆಗೆ ಸುಖಾಸುಮ್ಮನೆ ಮೋದಿ ಹೆಸರು ತಳಕು ಹಾಕುತ್ತಿದ್ದಾರೆ. ಅದು ಕೇವಲ ಕಾರಣವಷ್ಟೇ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

Edited By : Vijay Kumar
PublicNext

PublicNext

29/08/2022 06:35 pm

Cinque Terre

43.34 K

Cinque Terre

1

ಸಂಬಂಧಿತ ಸುದ್ದಿ