ದಾವಣಗೆರೆ: ಧಮ್ಕಿ, ಗೊಡ್ಡು ಬೆದರಿಕೆಗೆ ಹೆದರಲ್ಲ. ನೀವೇನೂ ಪಾಳೆಗಾರಿಕೆ ವಂಶಸ್ಥರಾ. ನಾನು ಎಂದವರು ಭೂಮಿ ಮೇಲೆ ನಾನು ಒಳಗೊಂಡಂತೆ ಯಾರೂ ಉಳಿದಿಲ್ಲ, ಉಳಿಯುವುದೂ ಇಲ್ಲ. ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತೀರಾ. ನೀವು ನನ್ನ ಬಗ್ಗೆ ಇನ್ನು ಮುಂದೆ ಅಸಂಬದ್ಧ ಶಬ್ಧ ಬಳಸಿದರೆ ಸುಮ್ಮನೆ ಕೂರಲ್ಲ. ನಾನೇನು ರಣಹೇಡಿಯಲ್ಲ. ತಾಯಿ ಎದೆ ಹಾಲು ಕುಡಿದು ಬೆಳೆದವನು ಎಂದು ಹೇಳುವ ಮೂಲಕ ಶಾಸಕ ಎಂ. ಪಿ. ರೇಣುಕಾಚಾರ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರ ಪುತ್ರನಿಗೆ ಅವಾಚ್ಯ ಶಬ್ಧಗಳಿಂದ ಮಂಜಪ್ಪ ನಿಂದಿಸಿರುವುದು ಸರಿಯಲ್ಲ. ನಾವು ಯಾವುದಕ್ಕೂ ಹೆದರುವುದಿಲ್ಲ. ಏನೇ ಮಾಡಿದರೂ ಅಂಜುವುದಿಲ್ಲ ಎಂದು ಹೇಳಿದರು.
ಹತಾಶ ಮನೋಭಾವದಿಂದ ಹೆಚ್. ಬಿ. ಮಂಜಪ್ಪ ಮತ್ತು ಮಾಜಿ ಶಾಸಕರು ಅಸಂಬದ್ಧ ಶಬ್ಧಗಳನ್ನು ಬಳಸಿದ್ದಾರೆ. ಇದಕ್ಕೆ ಸೊಪ್ಪು ಹಾಕಲ್ಲ. ಇದೇ ಸಿದ್ದರಾಮಯ್ಯರನ್ನು ಹೊನ್ನಾಳಿಗೆ ಕರೆಯಿಸಿದ್ದು ನಾನು. ಕೃಷಿ ಮೇಳಕ್ಕೆ ಬರಬೇಕೆಂದು ನಾನು ಸಿದ್ದರಾಮಯ್ಯರ ಮನೆಗೆ ಹೋಗಿ ಆಹ್ವಾನ ನೀಡಿದ್ದೆ. ಡಿ. ಕೆ. ಶಿವಕುಮಾರ್ ಅವರನ್ನೂ ಕರೆಯಿಸಿದ್ದೆ. ಇಬ್ಬರೂ ಬಂದಿದ್ದರು. ನನ್ನ ಮೇಲೆ ವಿಶ್ವಾಸ ಇಟ್ಟು ಬಂದಿದ್ದರು. ಪಕ್ಷಾತೀತವಾಗಿ ಕೃಷ ಮೇಳ ನಡೆಸಿದ್ದೆವು. ನನ್ನ ಮೇಲೆ ಅವರು ಗೌರವ ಕೊಟ್ಟು ಬಂದಿದ್ದರು ಎಂದರು.
PublicNext
26/08/2022 08:57 pm