ಮೈಸೂರು: ದೇಶವನ್ನು ವಿಭಜನೆ ಮಾಡಬೇಕು. ಹಲವೆಡೆ ಬಾಂಬ್ ಇಡಬೇಕು ಎಂದು ಬಯಸುವ ಕೆಲವು ಜನ ಇದ್ದಾರೆ. ಅಂಥವರಿಗೆ ಮಾತ್ರ ಟಿಪ್ಪು ಹೆಸರೆತ್ತಿದರೆ ಖುಷಿ ಆಗುತ್ತೆ. ಆದ್ರೆ ಕೊಡವರು ಅದೇ ಟಿಪ್ಪು ಸುಲ್ತಾನ್‌ನನ್ನು 32 ಬಾರಿ ಸೋಲಿಸಿದ್ದಾರೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ ವೇಳೆ ನಡೆದ ಘಟನಾವಳಿಗಳ ಬಗ್ಗೆ ಅಡ್ಡಂಡ ಕಾರ್ಯಪ್ಪ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಒಬ್ಬ ಪುಕ್ಕಲು ಮನುಷ್ಯ. ಕೊಡಗಿಗಿಗೆ ಬರಲು ಹೆದರುತ್ತಿದ್ದಾರೆ. ಸದ್ಯ ಅಲ್ಲಿ 144 ಸೆಕ್ಷನ್ ಜಾರಿಯಾಗಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಆದ್ರೆ ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಅವರು ನಿಷೇಧಾಜ್ಞೆಯನ್ನು ಅವರು ಉಲ್ಲಂಘಿಸಿದ್ದಾರೆ. ಈಗಲೂ ಅವರು ಕೊಡಗಿಗೆ ಬರಬಹುದಿತ್ತು. ನಿಷೇಧಾಜ್ಞೆ ನೆಪ ಹೇಳಿ ಬರಲು ಭಯ ಪಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಒಬ್ಬ ಪುಕ್ಕಲು ಮನುಷ್ಯ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.
PublicNext
26/08/2022 03:25 pm