ಗದಗ: ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಪುರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರು ಅಧಿಕಾರಿಗಳು ಗಪ್ಪಚುಪ್ಪ ಕುಳಿತುಕೊಂಡಿದ್ದಾರೆ.
ಅಧಿಕಾರ ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದ ಲಕ್ಷ್ಮೇಶ್ವರ ಪುರಸಭೆ ಸದಸ್ಯ ರಾಜೀವ ಕುಂಬಿ ಸದಸ್ಯತ್ವ ರದ್ದು ಗೊಳಿಸುವಂತೆ ಆಗ್ರಹಿಸಿ ಕರವೇ ಪ್ರವೀಣ ಶೇಟ್ಟಿ ಬಣ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಹೌದು ಲಕ್ಷ್ಮೇಶ್ವರ ಪಟ್ಟಣದ ಪುರಸಭೆಯಲ್ಲಿ ಸದಸ್ಯರಾಗಿರುವ ರಾಜೀವ ಗೊಡಚಪ್ಪ ಕುಂಬಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಎಂಟು ತಿಂಗಳಿಂದ ಜಿಲ್ಲಾಧಿಕಾರಿಗಳಿಗೆ, ದಂಡಾಧಿಕಾರಿಗಳಿಗೆ, ಉಪ ವಿಭಾಗ ಅಧಿಕಾರಿಗಳಿಗೆ, ಬೆಳಗಾವಿ ವಿಭಾಗ ಅಧಿಕಾರಿಗಳಿಗೆ ದೂರು ನೀಡಿದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ರಾಜೀವ ಕುಂಬಿ ಕಾನೂನು ಬಾಹಿರವಾಗಿ ಪುರಸಭೆಯ ಅಧಿನಿಯಮ ಮೀರಿ ಕಾಮಗಾರಿ ಮಾಡಿದ್ದಾರೆ. ಅವರು ತಪ್ಪಿತಸ್ಥರೆಂದು ಸಾಬೀತಾದರು ಯಾವುದೇ ಕ್ರಮ ಕೈಗೊಂಡಿಲ್ಲವೆನ್ನುವುದೇ ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ.
PublicNext
25/08/2022 09:07 pm