ಕೊರಟಗೆರೆ: ನಾಮಫಲಕದಲ್ಲಿ ನನ್ನ ಹೆಸರೇ ಇಲ್ಲದಂತೆ ಮಾಡುತ್ತೀರಾ. ಯಾವುದೇ ಅನುದಾನಗಳು ಸುಮ್ಮನೆ ಕ್ಷೇತ್ರಕ್ಕೆ ಬರೋದಿಲ್ಲ. ನಾನು ಹೋರಾಟ ಮಾಡಿ ಕ್ಷೇತ್ರಕ್ಕೆ ತರುತ್ತೇನೆ, ಈ ಕೆಲಸ ಮಾಡುವ ನನಗೆ ನನ್ನ ಹೆಸರು ಇಲ್ಲ ಅಂದರೆ ಏನು ಅರ್ಥ. ನಾನು ಇನ್ನೂ ಶಾಸಕರಾಗಿ ಜಿಂದಾ ಇದ್ದೇನೆ ನನ್ನ ಹೆಸರನ್ನು ಮರೆಯಬೇಡಿ. ನಾನು ಮಾಡಿದ ಕೆಲಸಕ್ಕೆ ಇಷ್ಟಾದರೂ ನನಗೆ ಕ್ರೆಡಿಟ್ ಸಿಗಲಿ ಎಂದು ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ ಅಸಮಾಧಾನ ಹೊರ ಹಾಕಿದ್ದಾರೆ.
ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮಲ್ಲೇಶಪುರ ಗ್ರಾಮದಲ್ಲಿ ಬುಧವಾರ ನಡೆದ ಜಲಜೀವನ್ ಮಿಷನ್ ಕಾಮಗಾರಿ ಉದ್ಘಾಟನೆ ವೇಳೆ ವೇದಿಕೆಯಲ್ಲಿ ಈ ಪ್ರಸಂಗ ನಡೆಯಿತು. ಜಿಲ್ಲಾ ಪಂಚಾಯತ್ ಇಂಜಿನಿಯರ್ ರವಿಕುಮಾರ್ ಅವರನ್ನು ಉದ್ಘಾಟನಾ ನಾಮಫಲಕದಲ್ಲಿ ಹೆಸರು ಹಾಕದಿರುವ ವಿಚಾರದ ಬಗ್ಗೆ ಪರಮೇಶ್ವರ್ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪರಮೇಶ್ವರ್ ಅವರ ನಡೆಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದು, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಈ ವಿಚಾರ ಸದ್ದು ಮಾಡುತ್ತಿದೆ.
ವರದಿ ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್
PublicNext
25/08/2022 11:57 am