ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಹಾರದಲ್ಲಿ ಮುಳುಗಿತು 'ಕಮಲ'; ಅರಳಿತು ನಿತೀಶ್ ಕುಮಾರ್ ನೇತೃತ್ವದ 'ಮಹಾಘಟಬಂಧನ್' ಸರ್ಕಾರ

ಬಹುಮತ ಸಾಬೀತು ಪಡಿಸಿದ ನಿತೀಶ್ ಕುಮಾರ್ ನೇತೃತ್ವದ 'ಮಹಾಘಟಬಂಧನ್' ಸರ್ಕಾರ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ 'ಮಹಾಘಟಬಂಧನ್' ಸರ್ಕಾರ ಇಂದು (ಬುಧವಾರ) ಬಹುಮತ ಸಾಬೀತುಪಡಿಸಿದ್ದು, ಬಿಜೆಪಿ ಶಾಸಕರು ವಿಧಾನಸಭೆಯಿಂದ ಹೊರನಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, "ಆರ್‌ಜೆಡಿ ಮತ್ತು ಜೆಡಿಯು ಎಂದಿಗೂ ಅಂತ್ಯವಿಲ್ಲದ ಪಾಲುದಾರಿಕೆಯನ್ನು ಹೊಂದಲಿದೆ" ಎಂದು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಸಿಎಂ ಕುಮಾರ್ ಅವರು ಬಿಜೆಪಿಯೊಂದಿಗಿನ ತಮ್ಮ ಸರ್ಕಾರದ ಮೈತ್ರಿಯನ್ನು ಕೊನೆಗೊಳಿಸಿದರು ಮತ್ತು ಆರ್‌ಜೆಡಿ ಹಾಗೂ ಪಕ್ಷೇತರರ ಶಾಸಕರೊಂದಿಗೆ ಸೇರಿ 'ಮಹಾಘಟಬಂಧನ್' ಪಕ್ಷಗಳೊಂದಿಗೆ ಕೈಜೋಡಿಸಿದರು.

Edited By : Vijay Kumar
PublicNext

PublicNext

24/08/2022 05:56 pm

Cinque Terre

23.19 K

Cinque Terre

5