ನವದೆಹಲಿ: ಬಿಜೆಪಿ ಸೇರಿದರೆ ತಲಾ 20 ಕೋಟಿ ರೂ. ಕೊಡುವುದಾಗಿ ನಾಲ್ವರು ಎಎಪಿ ಶಾಸಕರಿಗೆ ಆಫರ್ ನೀಡಲಾಗಿದೆ. ಅಷ್ಟೇ ಅಲ್ಲದೆ ಇತರ ಪಕ್ಷದ ನಾಯಕರನ್ನು ತಮ್ಮೊಂದಿಗೆ ಕರೆತಂದರೆ 25 ಕೋಟಿ ರೂ. ನೀಡುವುದಾಗಿ ಬಿಜೆಪಿ ಹೇಳಿದೆ ಎಂದು ದೆಹಲಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರ, ಮಧ್ಯಪ್ರದೇಶ, ಅರುಣಾಚಲ, ಕರ್ನಾಟಕ, ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚಿಸಿದಂತೆ, ದೆಹಲಿಯಲ್ಲಿಯೂ ಅಂತಹ ಪ್ರಯತ್ನಗಳನ್ನು ಮಾಡಲಾಗುತ್ತಿದೆ" ಎಂದು ಎಎಪಿಯ ದುರ್ಗೇಶ್ ಪಾಠಕ್ ಹೇಳಿದ್ದಾರೆ.
PublicNext
24/08/2022 03:10 pm