ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪಕ್ಷ ಬದಲಿಸಿದರೆ ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೈಬಿಡಲಾಗುವುದು ಎಂದು ಬಿಜೆಪಿ ನೀಡಿದ ಆಫರ್‌ನ ಆಡಿಯೋ ರೆಕಾರ್ಡಿಂಗ್ ಆಮ್ ಆದ್ಮಿ ಪಕ್ಷದ ಬಳಿ ಇದೆ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದ ಮೂಲಗಳು ತಿಳಿಸಿವೆ.
ಆಮ್ ಆದ್ಮಿ ಪಕ್ಷ(ಎಎಪಿ) ಆಡಿಯೋ ರೆಕಾರ್ಡಿಂಗ್ ಅನ್ನು 'ಸಮಯ ಬಂದಾಗ' ಬಿಡುಗಡೆ ಮಾಡುತ್ತೇವೆ. ಕೇಸರಿ ಪಕ್ಷದ ಮತ್ತೊಂದು ಮುಖವನ್ನು ಅನಾವಣ ಮಾಡುತ್ತೇವೆ ಎಂದು ಮೂಲವೊಂದು ತಿಳಿಸಿದೆ.
ಈ ಹಿಂದೆ, ಬಿಜೆಪಿ ತಮಗೆ ಮುಖ್ಯಮಂತ್ರಿ ಹುದ್ದೆಯ ಆಫರ್ ನೀಡಿತ್ತು. ಅಲ್ಲದೆ ಎಎಪಿ ತೊರೆದು ಕೇಸರಿ ಪಕ್ಷಕ್ಕೆ ಸೇರಿದರೆ ತಮ್ಮ ಮೇಲಿನ ಎಲ್ಲಾ ಪ್ರಕರಣಗಳನ್ನು ಮುಚ್ಚಲಾಗುವುದು ಎಂದು ಆಫರ್ ನೀಡಿತ್ತು ಎಂದು ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮೂಲಕ ಬಿಜೆಪಿ ತನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳ ವಿಚರವಾಗಿ ಜನರ ಗಮನ ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಸೋಡಿಯಾ ಸಿಡಿದಿದ್ದಾರೆ.
PublicNext
23/08/2022 03:30 pm