ಗದಗ: ಕಾಂಗ್ರೆಸ್‌ನವರು ಅಧಿಕಾರದ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮೊದಲು ಮಠ ಮಾನ್ಯಗಳಿಂದ ದೂರ ಇದ್ರು. ಸಿದ್ದರಾಮಯ್ಯ ಮೊದಲು ಸ್ವಾಮಿಗಳು ಬೇಡ ಅಂದೋರು, ಈಗ ಅನೇಕ ಮಠಗಳಿಗೆ ಅಲೆಯುತ್ತಿದ್ದಾರೆ. ಧರ್ಮದ ಬಗ್ಗೆ ಸ್ವಾಮೀಜಿ ಮುಂದೆ ಪಶ್ಚಾತ್ತಾಪ ಪಟ್ಟಿದ್ದಾರೆ. ಆದರೆ ಮರುದಿನವೇ ಆ ರೀತಿ ಹೇಳಿಲ್ಲಾ ಅಂತ ಉಲ್ಟಾ ಹೊಡೆದ್ರು. ಸಿದ್ದರಾಮಯ್ಯ ನಾಟಕ ಮಾಡುವುದನ್ನು ಬಿಡ್ರಿ. ಡಿಕೆಶಿ ಸಹ ಗದಗ ಜಿಲ್ಲೆ ಶಿರಹಟ್ಟಿಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ರಾಜಕಾರಣಕ್ಕಾಗಿ ಕಾಂಗ್ರೆಸ್‌ನವರು ಏನು ಮಾಡಲು ತಯಾರಾಗಿದ್ದಾರೆ ಎಂದು ವೇದಿಕೆ ಭಾಷಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ಧರಾಮಯ್ಯಗೆ ಮತ್ತೇರಿದೆ. ಯಾವ ಮತ್ತೇರಿದೆ ಎಂಬುದು ಅವರಿಗೇ ಗೊತ್ತಿಲ್ಲ. ಮತ್ತೇರಿದ ಭ್ರಮೆಯಲ್ಲಿ ಅವಸಾನ ಹೊಂದುತ್ತಿದ್ದಾರೆ. ಎಲ್ಲಾ ಜಾಣತನ ಯಾರ ಬಳಿಯಾದರೂ ಇದ್ದರೆ ಅದು ಸಿದ್ದರಾಮಯ್ಯ ಕಡೆ ಮಾತ್ರ ಇದೆ ಎಂದು ಕಿಚಾಯಿಸಿದರು. ಮಾಂಸ ಸೇವಿಸಲು ಬೇಡ ಎಂದಿಲ್ಲ. ಆದ್ರೆ ಯಾವಾಗ ತಿನ್ನಬೇಕು, ಯಾವಾಗ ಬೇಡ ಎಂಬ ಶಿಸ್ತು ಅವರಿಗಿಲ್ಲ. ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತಿನಿ ಎಂಬ ಅಂಹಕಾರ ಅವರ ಸಂಸ್ಕೃತಿಯನ್ನ ಬಿಂಬಿಸುತ್ತೆ. ಹಿಂದೂ ಪರಂಪರೆಗೆ ಸಿದ್ದರಾಮಯ್ಯ ವ್ಯತಿರಿಕ್ತವಾಗಿದ್ದಾರೆ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಹೇಳಿದ್ರು.
ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತನೇ. ಕೊಡಗಿನಲ್ಲಿ ದೇಶಾಭಿಮಾನ ಹೆಚ್ಚಿದೆ. ಅಂತಹ ಸ್ಥಳದಲ್ಲಿ ಸಾರ್ವಕರ್ ಕುರಿತು ಅವಹೇಳನ ಮಾತ್ನಾಡಿದ್ದಾರೆ. ಸಿದ್ದರಾಮಯ್ಯ ಹೇಳಿಕೆಯಿಂದಲೇ ಪ್ರಚೋದನೆಗೊಂಡಿದ್ದಾನೆ. ಪ್ರಚೋದನೆಕಾರಿ ಹೇಳಿಕೆ ನೀಡುವುದು ಕಾಂಗ್ರೆಸ್ ನಿಲ್ಲಿಸಬೇಕು. ಅಲ್ಪಸಂಖ್ಯಾತರ ಮತಗಳಿಕೆಗೆ ಪ್ರಚೋದನೆ ಹೇಳಿಕೆ ನಿಲ್ಲಿಸಬೇಕು ಎಂದು ಗದಗ ಜಿಲ್ಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ರು.
PublicNext
22/08/2022 08:43 pm