ಗದಗ: ಬರಲಿರುವ ವಿಧಾನಸಭಾ ಚುನಾವಣೆಗೆ ಶಿರಹಟ್ಟಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹೊಸ ಮುಖ ಕಾಣಲಿದೆ ಎಂಬ ವದಂತಿ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿಯವರ ನಿದ್ದೆ ಗೆಡಿಸಿದೆ. ಎರಡು ಬಾರಿ ಶಾಸಕರಾಗಿರುವ ಲಮಾಣಿಯವರ ಬದಲಿಗೆ ಬೇರೊಬ್ಬರು ಕಣದಲ್ಲಿ ಉಳಿಯುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಆಗಸ್ಟ್ 22 ರಂದು ಶಾಸಕ ಲಮಾಣಿಯವರು ತಮ್ಮ ಆಪ್ತರ ಬಳಗದೊಂದಿಗೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಹಾಲಿ ಶಾಸಕರ ಸ್ಥಿತಿ ಹೀಗಾಗಿದ್ದೇಕೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಮಾಡಿಕೊಂಡಿರುವ ವಿವಾದಗಳು ಒಂದೆರಡಲ್ಲ ಸಿಕ್ಕ ಸಿಕ್ಕವರಿಗೆ ತಮ್ಮ ಲೆಟರ್ ಹೆಡ್ ಪತ್ರಕ್ಕೆ ಸಹಿ ಹಾಕಿಕೊಟ್ಟು ಕ್ಷೇತ್ರದಲ್ಲಿ ಕಾನೂನು ಸುವ್ಯಸ್ಥೆಗೆ ಭಂಗ ತಂದಿರುವ ಪ್ರಕರಣ ಮಾಸುವ ಮುನ್ನವೇ ಮತ್ತೇ ಶಾಸಕರು ನಾಲಿಗೆ ಹರಿ ಬಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖಾಸಗಿ ಪತ್ರಿಕೆಯ ವರದಿಗಾರ ಕೇಳಿದ ಪ್ರಶ್ನೆಗೆ ರಾಮಣ್ಣ ಲಮಾಣಿಯವರು ಅವಾಚ್ಯ ಶಬ್ದಗಳಿಂದ ಉತ್ತರ ಕೊಟ್ಟಿದ್ದಾರೆ..
ತಮ್ಮ ಬಗ್ಗೆ ಸುಳ್ಳು ಆರೋಪ ಮಾಡುವವರು ಕ್ಷೇತ್ರದಲ್ಲಿ ಸಂಚರಿಸಿ ನೋಡಲಿ ಎಲ್ಲ ಕ್ಷೇತ್ರಗಳಿಂತ ತಮ್ಮ ಕ್ಷೇತ್ರದಲ್ಲೇ ಹೆಚ್ಚು ಕೆಲಸ ನಡೆಯುತ್ತಿದೆ. ಬೇರೆ ಊರಿಂದ ಬಂದು ಶಿರಹಟ್ಟಿ ಮತಕ್ಷೇದಲ್ಲಿ ಜೇಂಡಾ ಊರಲು ಬಂದವರ ಬಾಯಲ್ಲಿ ಇಡ್ತಿನಿ ಎಂದು ಕೆಂಡಾ ಮಂಡಲರಾದರು. ವರ್ಗಾವಣೆ ವಿಚಾರದಲ್ಲಿ ವ್ಯಾಪಕ್ ಭ್ರಷ್ಟಾಚಾರದ
ಆರೋಪದ ಕುರಿತು ಪ್ರತಿಕ್ರಿಯೆ ಕೇಳಲು ಖಾಸಗಿ ಪತ್ರಿಕೆಯ ವರದಿಗಾರ ಕೇಳಿದ ಪ್ರಶ್ನೆಗೆ ಅವಾಚ್ಯ ಪದಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
PublicNext
22/08/2022 03:39 pm