ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏನನ್ನು ತಿನ್ನಬೇಕು ಏನು ತಿನಬಾರದು ಎಂದು ನಿರ್ಧರಿಸಲು ಇವರು ಯಾರು? ಸಿದ್ದರಾಮಯ್ಯ ಪ್ರಶ್ನೆ

ಚಿಕ್ಕಬಳ್ಳಾಪುರ: ನಾನು ಏನು ತಿನ್ನಬೇಕು ಏನು ತಿನ್ನಬಾರದು ಎಂದು ಕೇಳಲು ಅವರು ಯಾರು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ. ಅವರು ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ ಸಂಗತಿ ಬಗ್ಗೆ ಮಾಹಿತಿ ನೀಡಿದರು.

ನಾನು ಏನು ಬೇಕಾದರೂ ತಿಂದು ಎಲ್ಲಿಗೆ ಬೇಕಾದರೂ ಹೋಗುತ್ತೇನೆ ಅಂತ ಮಡಿಕೇರಿಯಲ್ಲಿ ಮಾಂಸ ತಿಂದು ಹೋದ ವಿವಾದದ ಬಗ್ಗೆ ಅವರು ಕಿಡಿಕಾರಿದರು. ಇನ್ನೂ ನಾನು ಸುದರ್ಶನ ಅತಿಥಿ ಗೃಹದಲ್ಲಿ ಊಟ ಮಾಡಿದ್ದು ನಿಜ. ಸಂಜೆ ದೇವಾಲಯಕ್ಕೆ ಹೋಗಿದ್ದೆ ಅಂತ ಹೇಳಿದ್ದಾರೆ.

ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೆ ಮಾಂಸದೂಟ ಮತ್ತು ದೇವಸ್ಥಾನದ ವಿವಾದ ಸುತ್ತುಕೊಂಡಿದ್ದು, ಈ ನಡುವೆ ಹಲವು ಮಂದಿ ಅವರ ವಿರುದ್ದ ಕಿಡಿಕಾರುತ್ತಿದ್ದಾರೆ. ಅಂದ ಹಾಗೇ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಈಗ ಮತ್ತೆ ಮಾಂಸದೂಟ ಮಾಡಿ ದೇವಸ್ಥಾನಕ್ಕೆ ತೆರಳಿದ್ದರು ಎನ್ನುವ ವಿವಾದ ನಿರ್ಮಾಣ ಮಾಡಿದ್ದು, ಈಗ ಅದಕ್ಕೆ ಅಂತಿಮ ತೆರೆಯನ್ನು ಮಡಿಕೇರಿ ಪ್ರವಾಸದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಆರೋಪಕ್ಕೆ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಕೂಡ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮಡಿಕೇರಿ ಪ್ರವಾಸದ ವೇಳೆ ಮಾಂಸಹಾರ ಸೇವನೆ ಮಾಡಿಲ್ಲ. ನನಗೆ ನಾನ್ ವೆಜ್ ಬೇಡ ಎಂದು ವೆಜ್ ತಿಂದಿದ್ದಾರೆ. ಟೇಬಲ್ ಮೇಲೆ ಸಸ್ಯಹಾರ ಮತ್ತು ಮಾಂಸಹಾರ ಎರಡೂ ಇತ್ತು. ಆದರೆ ಸಿದ್ದರಾಮಯ್ಯ ಅವರು ನನಗೆ ಅಕ್ಕಿ ರೊಟ್ಟಿ ಬೇಕು ಅಂತಾ ಸಸ್ಯಹಾರ ಸೇವನೆ ಮಾಡಿದ್ರು. ನಾನೇ ಅವರಿಗೆ ಸಸ್ಯಹಾರ ಊಟವನ್ನು ಬಡಿಸಿದ್ದೇನೆ ಎಂದು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

21/08/2022 04:20 pm

Cinque Terre

35.93 K

Cinque Terre

6

ಸಂಬಂಧಿತ ಸುದ್ದಿ