ಗದಗ: ರಾಜ್ಯದಲ್ಲಿ ಇಲ್ಲದೇ ಇರುವಂತ ಸಂಸ್ಕೃತಿಯನ್ನ ಹುಟ್ಟು ಹಾಕುತ್ತಿದ್ದಾರೆ. ನಮ್ಮ ರಾಜ್ಯದ ರಾಜಕೀಯ ಸಂಸ್ಕೃತಿಯನ್ನ ಕೆಡಿಸಬೇಡಿ ಎಂದು ಶಾಸಕ ಎಚ್.ಕೆ ಪಾಟೀಲ್ ಮೊಟ್ಟೆ ಎಸೆತ ಪ್ರಕರಣ ಬಗ್ಗೆ ಗದಗನಲ್ಲಿ ಕಿಡಿಕಾರಿದರು.
ಇದು ಹೀಗೆ ಮುಂದುವರಿದರೆ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ್ದಾರೆ.. ಅಪ್ಪಚ್ಚು ರಂಜನ್ ಜೊತೆಗೆ ಇದ್ದ ಪೋಟೋನೇ ಇದೆ. ಪುರಾವೆ ಸಾಬೀತಾಗಲಿಲ್ಲವ...? ಅವನು ಕಾಂಗ್ರೆಸ್ ಅಂತ ಯಾರು ಹೇಳಿದ್ರು..? ಅಪ್ಪಚ್ಚು ರಂಜನ್ ಕಾಂಗ್ರೆಸ್...? ರಾಜಕೀಯ ಕಾರಣಕ್ಕೆನೆ ಮೊಟ್ಟೆ ಎಸೆದಿದ್ದಲ್ವಾ..? ಬೇಜವಾಬ್ದಾರಿ ಮಾತುಗಳಿಗೆ ನಾನು ಉತ್ತರಿಸೋದಿಲ್ಲ..! ಈ ರೀತಿ ಮೊಟ್ಟೆ ಎಸೆಯೋದು ಕಲ್ಲು, ಟೊಮ್ಯಾಟೊ ಎಸೆಯೋದು ಕೆಟ್ಟ ಸಂಸ್ಕೃತಿಗೆ ಕೈ ಹಾಕಬಾರದು ಎಂದು ಎಚ್ಚರಿಸಿದ್ದಾರೆ..
PublicNext
21/08/2022 03:50 pm