ಬೆಂಗಳೂರು: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದಿಂದಲೇ 'ಮಡಿಕೇರಿ ಚಲೋ'ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಈ ಪ್ರಕಟಣೆಯನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ತುಕಾರಾಮ್ ಇಂದ ಅಧಿಕೃತ ಸೂಚನೆ ಹೊರಡಿಸಲಾಗಿದ್ದು, ಸಿದ್ದರಾಮಯ್ಯ ಸೂಚನೆ ಮೇಲೆ ಸಿಎಲ್‌ಸಿ ಮಡಿಕೇರಿ ಚಲೋಗೆ ಪ್ರಕಟಣೆ ಹೊರಡಿಸಲಾಗಿದೆ. ಇನ್ನು ಆಗಸ್ಟ್ 26ರ ಬೆಳಗ್ಗೆ 10:30ಕ್ಕೆ ಕಾಂಗ್ರೆಸ್ ಪ್ರತಿಭಟನೆ ಕರೆ ನೀಡಿದೆ. ಮಡಿಕೇರಿಯ ಭಗವತಿ ನಗರದಲ್ಲಿರುವ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ. ಕಾಂಗ್ರೆಸ್ ಪಕ್ಷದ ವಿಧಾನಸಭಾ ಸದಸ್ಯರು, ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು, ರಾಜ್ಯ ಸಭಾ ಸದಸ್ಯರಿಗೂ ಈಗಾಗಲೇ ಸೂಚನೆ ರವಾನೆಯಾಗಿದೆ.
PublicNext
21/08/2022 02:26 pm