ತುಮಕೂರು: ಯಡಿಯೂರಪ್ಪ ಇಲ್ಲದೇ ಹೋದರೆ ಬಿಜೆಪಿ ಪಾರ್ಟಿಯೇ ಇಲ್ಲ' ಎಂದು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕೆ.ಎನ್ ರಾಜಣ್ಣ ಬಿಎಸ್‌ವೈ ಪರ ಬ್ಯಾಟಿಂಗ್ ಬೀಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿತ್ ಔಟ್ ಯಡಿಯೂರಪ್ಪ ದೆರೀಸ್ ನೋ ಬಿಜೆಪಿ. ಅವರಿಂದ ಅಧಿಕಾರಕ್ಕೆ ಬಂದ ಬಿಜೆಪಿ ಅವರಿಂದ ಅಧಿಕಾರ ವಾಪಸ್ ಪಡೆಯಲು ಕಣ್ಣೀರು ಹಾಕಿಸಿದರು. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪನವರ ಕಣ್ಣೀರಿನಲ್ಲಿ ಬಿಜೆಪಿ ಪಕ್ಷ ಕೊಚ್ಚಿ ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
PublicNext
20/08/2022 06:13 pm