ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

RSS ದೇಶದ್ರೋಹಿ ಸಂಘಟನೆ : ಪ್ರಿಯಾಂಕ್ ಖರ್ಗೆ

ವಾಡಿ (ಚಿತ್ತಾಪುರ) : ಆರ್ ಎಸ್ ಎಸ್ ಒಂದು ಪಕ್ಕಾ ದೇಶದ್ರೋಹಿಗಳಿರುವ ಸಂಘಟನೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಚಿತ್ತಾಪುರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಸಿಕ್ಕು 50 ವರ್ಷಗಳ ನಂತರವೂ ಕಚೇರಿಗಳ ಮೇಲೆ ತ್ರೀವರ್ಣ ಬಾವುಟ ಹಾರಿಸಿಲ್ಲ. ತಿರಂಗಾ ಅಪಶಕುನ ಎಂದು ಭಾವಿಸಿ ಆರ್ ಎಸ್ ಎಸ್ ಧ್ವಜಾರೋಹಣ ಮಾಡಿರಲಿಲ್ಲ.

ಕೋಮುವಾದಿಗಳು ಇತ್ತೀಚೆಗೆ ದೇಶಭಕ್ತಿಯ ಮಾತನಾಡಲು ಶುರುಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಕೊಡುಗೆಯನ್ನು ದೇಶದ ಜನತೆ ಮರೆತಿಲ್ಲ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಸ್ಮರಿಸುತ್ತಲೇ ಸಾವರ್ಕರ್ ರನ್ನು ದೇಶಭಕ್ತ ಎಂದು ಬಿಂಬಿಸಲು ಹೊರಟಿರುವ ಬಿಜೆಪಿಗೆ ಸ್ವಾತಂತ್ರ್ಯ ಸಂಭ್ರಮಾಚರಿಸುವ ಯಾವ ನೈತಿಕತೆಯೂ ಇಲ್ಲ. ನಿಜವಾದ ದೇಶಭಕ್ತರು ನಾವು ಕಾಂಗ್ರೆಸ್ ನವರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Edited By : Nirmala Aralikatti
PublicNext

PublicNext

19/08/2022 09:09 pm

Cinque Terre

85.7 K

Cinque Terre

82

ಸಂಬಂಧಿತ ಸುದ್ದಿ