ಚಿಕ್ಕನಾಯಕನಹಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದ್ದ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ತಾಲೂಕಿನ ಜೆ.ಸಿ.ಪುರದಲ್ಲಿ ಮಾತನಾಡಿದ ಸಚಿವರು, 'ಆಡಿಯೋ ತುಂಬಾ ಹಳೆಯದು, ಯಾವಾಗ ಮಾತನಾಡಿದ್ದೇನೆ ಅನ್ನೋದು ನನಗೆ ನೆನಪಿಲ್ಲ. ಆಡಿಯೋದಲ್ಲಿ ಇರುವ ಧ್ವನಿ ನನ್ನದೆ. ಆಡಿಯೋ ರೆಕಾರ್ಡಿಂಗ್ ಮಾಡಿದ ವ್ಯಕ್ತಿ ವಿರುದ್ಧ ದೂರು ನೀಡುತ್ತೇನೆ. ಗೊತ್ತಿಲ್ಲದೇ ಕಾಲ್ ರೆಕಾರ್ಡ್ ಮಾಡೋದು ಕೂಡ ಅಪರಾಧ. ಹಾಗಾಗಿ ಪ್ರಸಾರ ಮಾಡಿದ ಮಾಧ್ಯಮದ ಮೇಲೂ ಕೇಸ್ ಹಾಕುತ್ತೇನೆ. ಅಪರಿಚಿತ ವ್ಯಕ್ತಿಯ ದಾಖಲೆ ಮಾಧ್ಯಮದವರು ನೀಡಲಿ. ಯಾರೂ ನನ್ನ ವಿರುದ್ಧ ಷಡ್ಯಂತ್ರ ಮಾಡಿಲ್ಲ. ಯಾರನ್ನೂ ನಾನು ದೂಷಣೆ ಮಾಡೋದಿಲ್ಲ. ಈಗಾಗಲೇ ಸಿಎಂಗೆ ಸ್ಪಷ್ಟನೆ ನೀಡಿದ್ದೇನೆ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಮೇಯವೇ ಇಲ್ಲ. ಸಿಎಂ ರಾಜೀನಾಮೆ ಕೇಳಿದರೆ ಕೊಡುತ್ತೇನೆ ಎಂದರು.
ಅನಾಮಿಕ ವ್ಯಕ್ತಿ ನನ್ನ ಪ್ರವೋಕ್ ಮಾಡಿದ್ದ. ಹಾಗಾಗಿ ನಾನು ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಹೇಳಿದೆ. ಸಚಿವ ಸೋಮಶೇಖರ್ ಕುರಿತು ನಾನು ಗೌರವಯುತವಾಗಿ ಮಾತನಾಡಿದ್ದೇನೆ. ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಸರ್ಕಾರದ ಬಗ್ಗೆ ಎರಡು ಮಾತಿಲ್ಲ. ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಬದಲಾವಣೆ ಇಲ್ಲ. ಸಚಿವ ಸಂಪುಟ ಪುನಾರಚನೆ ಆಗೋದಿಲ್ಲ ಎಂದು ಮಾಧುಸ್ವಾಮಿ ಸ್ಪಷ್ಟನೆ ನೀಡಿದರು.
ವರದಿ: ರಾಘವೇಂದ್ರ ದಾಸರಹಳ್ಳಿ
PublicNext
17/08/2022 09:46 am