ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ವೇದಿಕೆಯಲ್ಲಿ ಕಣ್ಣೀರು ಹಾಕಿದ ಸಚಿವ ಸಿಸಿ ಪಾಟೀಲ್ ಹಾಗೂ ಲಕ್ಷ್ಮಣ್ ಸವದಿ

ವರದಿ : ಸಂತೋಷ ಬಡಕಂಬಿ.

ಅಥಣಿ: ರಾಜಕೀಯ ಜೀವನದಲ್ಲಿ ಸಿ ಸಿ ಪಾಟೀಲ ಅವರು ನನಗೆ ಸ್ವಂತ ಸಹೋದರನಿಗಿಂತ ಹೆಚ್ಚು ಮಾರ್ಗದರ್ಶನ ಮಾಡಿದ್ದಾರೆ, ನನ್ನ ರಾಜಕೀಯ ಏರಿಳತದ ಪ್ರತಿಯೊಂದು ಹಂತದಲ್ಲಿ ನನ್ನ ಬೆನ್ನೆಲುಬಾಗಿದ್ದವರು ಎಂದು ಲಕ್ಷ್ಮಣ ಸವದಿ ಅವರು ತಮ್ಮ ಹಳೆ ವಿಚಾರ ಮೆಲುಕು ಹಾಕುತ್ತಿರುವಾಗ ಸಚಿವ ಸಿ ಸಿ ಪಾಟೀಲ ಅವರು ಕಣ್ಣೀರು ಹಾಕಿದ ಪ್ರಸಂಗ ಜರುಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಇಂದು ಜರುಗಿದ ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ವೇದಿಕೆ ಕಾರ್ಯಕ್ರಮದಲ್ಲಿ ಲಕ್ಷ್ಮಣ ಸವದಿ ಅವರು ಕಾರ್ಯಕ್ರಮ ಉದ್ದಕ್ಕೂ ಭಾವನಾತ್ಮಕ ಭಾಷಣ ಮಾಡುತ್ತಾ ತಮಗೂ ಸಿ ಸಿ ಪಾಟೀಲ ಅವರಿಗೂ ಇರುವ ಸಂಭಂಧಗಳ ಬಗ್ಗೆ ನೆರೆದ ಸಾರ್ವಜನಿಕರಿಗೆ ವಿವರಿಸುತ್ತಿರುವಾಗ ಸಿ ಸಿ ಪಾಟೀಲ ಅವರು ಕಣ್ಣೀರು ಹಾಕಿದರು ಅವರನ್ನು ನೋಡಿ ಸವದಿ ಅವರೂ ಕೂಡ ಕಣ್ಣೀರು ಹಾಕಿ ನೆರೆದ ಪ್ರೇಕ್ಷಕರನ್ನು ಭಾವಪರವಶವಾಗಿಸಿದರು.

ಅನಂತರ ಸವದಿ ಅವರ ಭಾಷಣ ವೇಳೆ ಅಭಿಮಾನಿ ಒರ್ವ ಕರ್ನಾಟಕ ಹುಲಿ ಎಂದು ಘೋಷಣೆ ಮಾಡಿದಾಗ 'ಏ ಸುಮ್ಮನಿರು ಇನ್ನಲ್ಲೆ ಹುಲಿ', ಹುಲಿ ಹಳೆದು ಆಗಿದೆ, ಹುಲಿ ಉಗುರು ಹೋಗಿದೆ ಎಂದು ಕಳೆದ ಅಥಣಿ ಚುನಾವಣೆಯಲ್ಲಿ ಸೋತಿರುವ ಘಟನೆ ಮೆಲುಕುಹಾಕಿದರು.

Edited By : Nagesh Gaonkar
PublicNext

PublicNext

16/08/2022 10:32 pm

Cinque Terre

44.92 K

Cinque Terre

1

ಸಂಬಂಧಿತ ಸುದ್ದಿ