ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕಾಂಗ್ರೆಸ್‌ನವರಿಗೆ ಸಾವರ್ಕರ್ ಹೆಸರು ಹೇಳುವ ಯೋಗ್ಯತೆಯಿಲ್ಲ; ಸಿ‌ ಸಿ ಪಾಟೀಲ

ವೀರ ಸಾವರ್ಕರ್ ಅವರನ್ನು ಟಿಪ್ಪು ಸುಲ್ತಾನರಿಗೆ ಹೋಲಿಕೆ ಮಾಡುವ ಕಾಂಗ್ರೆಸ್‌ನವರಿಗೆ ವೀರ ಸಾವರ್ಕರ್ ಹೆಸರು ಹೇಳುವುದಕ್ಕೆ ಯೋಗ್ಯತೆ ಇಲ್ಲಾ, ಅವರ ನಾಲಿಗೆಯಲ್ಲಿ ಸಾವರ್ಕರ್ ಹೆಸರು ಬರಬಾರದು ಎಂದು ಲೋಕೊಪಯೋಗಿ ಸಚಿವ ಸಿ ಸಿ ಪಾಟೀಲ ಅವರು ಕಾಂಗ್ರೆಸ್ ನಾಯಕರ ಮೇಲೆ ಹರಿಹಾಯ್ದರು.

ಅವರು ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಾ ಅಧಿಕಾರಕ್ಕೆ ಬರಬೇಕು ಎಂದು ಇತಿಹಾಸ ಮಹಾಪುರುಷನ್ನೂ ಕಾಂಗ್ರೆಸ್‌ನವರು ಗೇಲಿ ಮಾಡುವುದು ಎಷ್ಟು ಸರಿ ? ಕಾಂಗ್ರೇಸ್ಸಿನವರು ಧರ್ಮವನ್ನು ರಾಜಕಾರಣಕ್ಕೆ ಓಲೈಕೆ ಮಾಡುತ್ತಿದ್ದಾರೆ, ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ನನಗೆ ವೈಯಕ್ತಿಕವಾಗಿ ಗೌರವವಿದೆ. ಈ ರೀತಿ ಮತ ರಾಜಕೀಯಕ್ಕೆ ಇತಿಹಾಸ ಮಹಾಪುರುಷರನ್ನು ಗೇಲಿ ಮಾಡುವುದು ಸರಿಯಲ್ಲ ಎಂದರು.

ಅಥಣಿ ಶಾಸಕರು ಕಾರ್ಯಕ್ರಮಕ್ಕೆ ಗೈರು ವಿಚಾರವಾಗಿ ಮಾತನಾಡಿ ಕುಮಠಳ್ಳಿ ಕಾರ್ಯಕ್ರಮಕ್ಕೆ ಗೈರಾಗಿಲ್ಲ, ಅವರಿಗೆ ನ್ಯಾಯಾಲಯದಲ್ಲಿ ವಾರೆಂಟ್ ಇರುವುದರಿಂದ ಬೆಂಗಳೂರಿಗೆ ಹೋಗಿದ್ದಾರೆ, ನಾನು ದೂರವಾಣಿ ಮೂಲಕ ಸಂಪರ್ಕಿಸಿದ್ದೆನೆ. ಅವರು ಕಾರ್ಯಕ್ರಮದಲ್ಲಿ ಗೈರಾಗಿಲ್ಲ ಎಂದು ಸಮಜಾಯಿಷಿ ನೀಡಿದರು. ಚಿಕ್ಕೋಡಿ ಉಪವಿಭಾಗದಲ್ಲಿ ಕಳಪೆ ಕಾಮಗಾರಿ ವಿಚಾರ ನನ್ನ ಗಮನಕ್ಕೆ ಬಂದಿದೆ. ಚಿಕ್ಕೋಡಿ ಚೀಫ್ ಆಫೀಸ್‌ರ ಜೊತೆ ನಾನು ಮಾತನಾಡಿ ಯಾರು ಕಳಪೆ ಕಾಮಗಾರಿ ಮಾಡುವರು ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವೆ ಎಂದರು.

Edited By :
PublicNext

PublicNext

16/08/2022 08:09 pm

Cinque Terre

78.36 K

Cinque Terre

1

ಸಂಬಂಧಿತ ಸುದ್ದಿ