ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಕೇಟರಿಂಗ್ ಮ್ಯಾನೇಜರ್​ಗೆ ಶಿವಸೇನೆ ಶಾಸಕ ಸಂತೋಷ್ ಬಂಗಾರ್ ಕಪಾಳಮೋಕ್ಷ.!

ಮಹಾರಾಷ್ಟ್ರ: ಮಹಾರಾಷ್ಟ್ರ ಶಿವಸೇನೆಯ ಶಾಸಕ ಸಂತೋಷ್ ಬಂಗಾರ್ ಅವರು ತಮ್ಮ ಕ್ಷೇತ್ರವಾದ ಹಿಂಗೋಲಿಯಲ್ಲಿ ಕೇಟರಿಂಗ್ ಮ್ಯಾನೇಜರ್ ಒಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಕಳೆದ ತಿಂಗಳು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಯುವ ಕೆಲವೇ ಗಂಟೆಗಳ ಮೊದಲು ಸಿಎಂ ಏಕನಾಥ್ ಶಿಂಧೆ ನೇತೃತ್ವದ ಪಾಳಯಕ್ಕೆ ಬಂದಿದ್ದ ಶಿವಸೇನೆಯ ಬಂಡಾಯ ಶಾಸಕ ಸಂತೋಷ್ ಬಂಗಾರ್ ಅವರೇ ಮ್ಯಾನೇಜರ್‌ಗೆ ಹೊಡೆದ ಶಾಸಕ. ಕಳಪೆ ಗುಣಮಟ್ಟದ ಮಧ್ಯಾಹ್ನದ ಊಟ ನೀಡಲಾಗುತ್ತಿದೆ ಎಂದು ಆರೋಪದ ಹಿನ್ನೆಲೆಯಲ್ಲಿ ಖಾಸಗಿ ಕೇಟರಿಂಗ್ ಮ್ಯಾನೇಜರ್‌ಗೆ ನಿಂದಿಸಿ ಸಂತೋಷ್ ಬಂಗಾರ್ ಹಲ್ಲೆ ಮಾಡಿದ್ದಾರೆ. ನಿನ್ನೆ (ಆಗಸ್ಟ್15) ಅವರ ಕ್ಷೇತ್ರವಾದ ಹಿಂಗೋಲಿಯಲ್ಲಿ ಈ ಘಟನೆ ನಡೆದಿದೆ.

ಬಂಗಾರ್ ಅವರು ಆಹಾರದ ಗುಣಮಟ್ಟವನ್ನು ಪ್ರಶ್ನಿಸುತ್ತಿರುವುದು ಮತ್ತು ನಂತರ ಆಹಾರ ಸೇವೆಯ ನೇತೃತ್ವ ವಹಿಸಿದ್ದ ವ್ಯವಸ್ಥಾಪಕರಿಗೆ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂತರ ಮ್ಯಾನೇಜರ್ ಆ, ಆಹಾರ ವಿಲೇವಾರಿ ಆಗಬೇಕಾಗಿರುವ ಬೇಡವಾದ ಆಹಾರದ ಭಾಗವೆಂದು ಹೇಳಿಕೊಂಡರಾದರೂ ಶಾಸಕರೂ ಅವರ ಮಾತು ಕೇಳದೇ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Edited By : Vijay Kumar
PublicNext

PublicNext

16/08/2022 01:13 pm

Cinque Terre

68.1 K

Cinque Terre

1

ಸಂಬಂಧಿತ ಸುದ್ದಿ