ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ತಂದೆ ನೆನೆದು ಭಾವುಕರಾದ ಬೈರತಿ ಬಸವರಾಜ

ದಾವಣಗೆರೆ: ನಿನ್ನೆ ನನ್ನ ತಂದೆ ನಿಧನರಾದರು. ಆಗ ನನಗೆ ದಾವಣಗೆರೆ ಬರಲಿಕ್ಕೆ ಆಗುತ್ತೋ ಇಲ್ಲವೋ ಎಂಬ ಅಳುಕು ಇತ್ತು. ಮಾನಸಿಕವಾಗಿ ತೀವ್ರ ನೊಂದಿದ್ದೆ. ಆದರೂ ಕೂಡ ತಂದೆಯ ಅಂತಿಮ ವಿಧಿವಿಧಾನಗಳನ್ನು ಮುಗಿಸಿ ರಾತ್ರಿ 8ಗಂಟೆಗೆ ಬೆಂಗಳೂರು ಬಿಟ್ಟು ದಾವಣಗೆರೆಗೆ ಬಂದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆ ಜನರ ಜೊತೆಗಿನ ಅವಿನಾವಭಾವ ಸಂಬಂಧ ಇದ್ದ ಕಾರಣಕ್ಕೆ ಬರಲು ಸಾಧ್ಯವಾಯ್ತು. ಇದನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಬೈರತಿ ಭಾವುಕರಾಗಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವನಾಗಿ ಮೂರು ಬಾರಿ ಧ್ವಜಾರೋಹಣ ನೆರವೇರಿಸಲು ಅವಕಾಶ ಸಿಕ್ಕಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸುತ್ತಿದ್ದೇವೆ. ಜಿಲ್ಲೆಯ ಸೇವಕನಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಶ್ರಮಿಸುತ್ತೇನೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿದ್ದು ಖುಷಿ ತಂದಿದೆ. ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿರಲಿಲ್ಲ. ಇಂದು ಮಕ್ಕಳು ನಡೆಸಿಕೊಟ್ಟ ಕಾರ್ಯಕ್ರಮ ಸಂತಸ ತಂದಿದೆ ಎಂದು ಹೇಳಿದರು.

Edited By : Nagesh Gaonkar
PublicNext

PublicNext

15/08/2022 06:53 pm

Cinque Terre

25.99 K

Cinque Terre

0

ಸಂಬಂಧಿತ ಸುದ್ದಿ