ನವದೆಹಲಿ: ಭಾರತದಲ್ಲಿ ಕುಟುಂಬ ರಾಜಕಾರಣದಿಂದ ನಮ್ಮ ದೇಶದ ಪ್ರತಿಭೆ, ಸಾಮರ್ಥ್ಯ ಹಾಳಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಅವರು, 'ಭ್ರಷ್ಟಾಚಾರಕ್ಕೆ ಕುಟುಂಬ ರಾಜಕಾರಣವೂ ಒಂದು ಕಾರಣವಾಗುತ್ತಿದೆ. ಪರಿವಾರವಾದದಿಂದಲೂ ನಾವು ಬಿಡಿಸಿಕೊಳ್ಳಬೇಕು. ನಾವು ನಮ್ಮ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕು. ರಾಜಕಾರಣದಲ್ಲಿಯೂ ಪರಿವಾರವಾದವು ಪರಿವಾರ ಭದ್ರಪಡಿಸಿಕೊಳ್ಳಲು ಯತ್ನಿಸುತ್ತದೆಯೇ ಹೊರತು ದೇಶದ ಅಭಿವೃದ್ಧಿಗೆ ಗಮನ ಕೊಡುವುದಿಲ್ಲ. ಬನ್ನಿ, ಭಾರತದ ರಾಜಕಾರಣವನ್ನು ಶುದ್ಧೀಕರಣಗೊಳಿಸಲು ನಾವು ದೇಶದ ಪರಿವಾರವಾದವನ್ನು ಕೊನೆಗಾಣಿಸೋಣ. ಇದು ಇಂದಿನ ಅನಿವಾರ್ಯತೆ' ಎಂದು ಕರೆ ಕೊಟ್ಟರು.
PublicNext
15/08/2022 10:00 am