ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ತಿರಂಗಾ ರ‍್ಯಾಲಿ'ಯಲ್ಲಿ ನುಗ್ಗಿದ ಹಸು- ಗುಜರಾತ್‌ನ ಮಾಜಿ ಡಿಸಿಎಂ ಪಟೇಲ್‌ಗೆ ಮೂಳೆ ಮುರಿತ

ಗಾಂಧಿನಗರ: 'ತಿರಂಗಾ ರ‍್ಯಾಲಿ'ಯಲ್ಲಿ ಹಸು ನುಗ್ಗಿದ ಪರಿಣಾಮ ಗುಜರಾತ್‌ನ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಎಡಗಾಲಿಗೆ ಗಂಭೀರವಾಗಿ ಗಾಯವಾಗಿದೆ.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಕಾದಿ ಪಟ್ಟಣದಲ್ಲಿ ನಿತಿನ್ ಪಟೇಲ್ ಅವರ ನೇತೃತ್ವದಲ್ಲಿ ತಿರಂಗ ಯಾತ್ರೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಅವಘಡದಲ್ಲಿ ಎಡಗಾಲಿನ ಮೂಳೆ ಮುರಿತ ಉಂಟಾಗಿದೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಟೇಲ್ ಅವರು ತ್ರಿವರ್ಣ ಧ್ವಜ ಹಿಡಿದು ನಡೆಯುತ್ತಿದ್ದು, ಅವರ ಸುತ್ತಲೂ ಜನರ ಗುಂಪು ನೆರೆದಿತ್ತು. ರಭಸದಿಂದ ನುಗ್ಗಿದ ಹಸು, ದಾರಿಯಲ್ಲಿ ಎದುರಾದ ಅನೇಕ ಜನರಿಗೆ ಅಪ್ಪಳಿಸಿದೆ. ಧ್ವಜ ಹಿಡಿದು ಮುಂದೆ ಬರುತ್ತಿದ್ದ ಪಟೇಲ್ ಅವರನ್ನೂ ತಾಕಿಸಿಕೊಂಡು ಓಡಿದೆ. ಆಗ ಆಯ ತಪ್ಪಿದ ಪಟೇಲ್ ಅವರು ನೆಲದ ಮೇಲೆ ಬಿದ್ದಿದ್ದಾರೆ.

ಪಟೇಲ್ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಎಕ್ಸ್‌-ರೇ ಮತ್ತು ಸಿಟಿ ಸ್ಕ್ಯಾನ್ ಮಾಡಲಾಯಿತು. ಅದರಲ್ಲಿ ಅವರ ಎಡ ಕಾಲಿಗೆ ಸಣ್ಣ ಮುರಿತ ಉಂಟಾಗಿರುವುದು ಕಂಡುಬಂದಿದೆ ಎಂದು ಮಾಧ್ಯಮಗಳಿಗೆ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

13/08/2022 09:34 pm

Cinque Terre

84.61 K

Cinque Terre

9

ಸಂಬಂಧಿತ ಸುದ್ದಿ