ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೆಡಿಯು ಸಾಥ್ ಇಲ್ಲದೆಯೂ ಸರಳ ಬಹುಮತ ಪಡೆಯಲಿದೆ ಎನ್‌ಡಿಎ: ಸಮೀಕ್ಷೆ ವರದಿ

ನವದೆಹಲಿ: ಬೆಲೆ ‍ಏರಿಕೆ ಕೊರೊನಾ ಬಿಕ್ಕಟ್ಟು, ನಿರುದ್ಯೋಗ ಹಾಗೂ ಇತರ ಸಮಸ್ಯೆಗಳ ನಡುವೆಯೂ ಸದ್ಯ ಲೋಕಸಭೆ ಚುನಾವಣೆ ನಡೆದರೆ ಜೆಡಿಯು ಬೆಂಬಲ ಇಲ್ಲದೇ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ದೊರೆಯಲಿದೆ . 286 ಸೀಟುಗಳನ್ನು ಗೆದ್ದು ಅಧಿಕಾರಕ್ಕೇರಲಿದೆ ಎಂದು ಸಿ&ವೋಟರ್ ಸಮೀಕ್ಷೆ ಹೇಳಿದೆ.

ಬಿಹಾರದಲ್ಲಿ ಇತ್ತೀಚಿನ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳ ನಂತರ ಸಂಯುಕ್ತ ಜನತಾದಳವು ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡಿದೆ. ಇದರ ಪರಿಣಾಮ 307 ಲೋಕಸಭೆ ಸೀಟುಗಳಲ್ಲಿ 21ರಷ್ಟು ಸೀಟುಗಳು ಕಡಿಮೆಯಾಗಲಿವೆ ಎಂದು ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ 1,22,016 ಮಂದಿಯಲ್ಲಿ ಶೇ.53ರಷ್ಟು ಜನರು ಈಗಲೂ ಪ್ರಧಾನಿ ಹುದ್ದೆಗೆ ಮೋದಿಯೇ ಸೂಕ್ತ ಎಂದಿದ್ದಾರೆ. ಶೇ.9ರಷ್ಟು ಮಂದಿ ರಾಹುಲ್​ ಗಾಂಧಿ ಪರ ಒಲವು ವ್ಯಕ್ತಪಡಿಸಿದ್ದರೆ, ಶೇ.7ರಷ್ಟು ಮಂದಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಪ್ರಧಾನಿಯಾಗಬೇಕು ಎಂದ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Edited By : Nagaraj Tulugeri
PublicNext

PublicNext

13/08/2022 02:13 pm

Cinque Terre

79.93 K

Cinque Terre

17

ಸಂಬಂಧಿತ ಸುದ್ದಿ