ಕಲಬುರಗಿ: ಇದು ಲಂಚ- ಮಂಚದ ಸರಕಾರ. ಯುವಕರಿಗೆ ನೌಕರಿ ಬೇಕಂದ್ರೆ ಲಂಚ ಕೊಡಬೇಕು, ಯುವತಿಯರಿಗೆ ನೌಕರಿ ಬೇಕಂದರೆ ಮಂಚ ಹತ್ತಬೇಕು ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ಕಳೆದ ಮೂರು ವರ್ಷದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಈ ಸರ್ಕಾರ ಶೂನ್ಯ ಸಾಧನೆ ಮಾಡಿದೆ. ಉದ್ಯೋಗ ಮೇಳ ಮಾಡಿದರೂ ಕೂಡ ಒಂದೂ ಸಾವಿರ ಜನರಿಗೆ ಉದ್ಯೋಗ ಕೊಡುತ್ತಿಲ್ಲ. ಪರೀಕ್ಷೆಯಲ್ಲಿ ಅಕ್ರಮ ಮಾಡುವವರಿಗೆ ಸರ್ಕಾರದ ಬಗ್ಗೆ ಎಷ್ಟು ಭಯ ಇದೆ ಅಂತ ಇದರಿಂದಲೇ ಗೋತ್ತಾಗುತ್ತದೆ. ಇದೊಂದು ಅಸಮರ್ಥ ಸರ್ಕಾರ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. 40 ಪರ್ಸೆಂಟ್ ಕೊಟ್ಟರೆ ಎಲ್ಲ ಅಕ್ರಮ ನಡೆಸಬಹುದು ಅನ್ನೋದು ಸಾಬೀತಾಗಿದೆ. 40 ಪರ್ಸೆಂಟ್ ಕೊಟ್ಟರೆ ವಿಧಾನಸೌಧ ಕೂಡ ಮಾರಿ ಬಿಡುತ್ತಾರೆ. ನೇಮಕಾತಿಯಲ್ಲಿ ನಡೆದ ಹಗರಣಗಳ ಬಗ್ಗೆ ಒಂದು ಫಾಸ್ಟ್ ಟ್ರ್ಯಾಕ್ ಕೋರ್ಟ್ ಆಗಬೇಕು. ಆ ಮೂಲಕ ವೇಗವಾಗಿ ತನಿಖೆ ನಡೆಯಬೇಕು. ಸರ್ಕಾರಕ್ಕೆ ತಾಕತ್ ಇದ್ರೆ ಸಿಟ್ಟಿಂಗ್ ಜಡ್ಜ್ ರಿಂದ ತನಿಖೆ ಮಾಡಿಸಲಿ. ಯುವಕರು ಸರ್ಕಾರದ ಮೇಲೆ ಭರವಸೆ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
PublicNext
12/08/2022 02:50 pm