ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯನವರಿಗೆ ಪಾಠ ಕಲಿಯುವ ಅಗತ್ಯ ನಮ್ಮ ಪಕ್ಷಕ್ಕಿಲ್ಲ: ಕೇಂದ್ರ ಸಚಿವ ನಾರಾಯಣ ಸ್ವಾಮಿ

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಗೊಂದಲ ಸೃಷ್ಟಿ ಮಾಡುವುದು ವಾಡಿಕೆ. ಆಡಳಿತ ಯಂತ್ರ ಸರಿ ದಿಕ್ಕಿನಲ್ಲಿ ಹೋಗುವಾಗ ಕುತಂತ್ರ ಮಾಡುತ್ತಾರೆ. ಬಿಜೆಪಿ ಹಾಗೂ ಬಿ.ಎಸ್. ಯಡಿಯೂರಪ್ಪ ಸಂಕಲ್ಪದಂತೆ ಬೊಮ್ಮಾಯಿ ಸಿಎಂ ಆಗಿದ್ದಾರೆ. ವಚನ ಬನಡಿಯೂರಪ್ಪ ಮಾರ್ಗದರ್ಶನ, ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದು ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಹೇಳಿದ್ದಾರೆ.

ಇನ್ನು ಇತ್ತ ದಲಿತ ಸಿಎಂ ವಿಚಾರಕ್ಕೆ ನಾರಾಯಣ ಸ್ವಾಮಿ ಪ್ರತಿಕ್ರಿಯೆ ಕೂಡ ನೀಡಿದ್ದು, ಖಂಡಿತವಾಗಿ ಎಲ್ಲಾ ವರ್ಗಕ್ಕೆ ಅವಕಾಶ ನೀಡಬೇಕುವ.ಬಿಜೆಪಿ ಪಕ್ಷ ಅವಕಾಶ ಬಂದಾಗ ಎಲ್ಲಾ ವರ್ಗಗಳಿಗೂ ಅವಕಾಶ ನೀಡುತ್ತದೆ. ಅಮೃತ ಮಹೋತ್ಸವ ದೇಶದ ಒಗಟ್ಟಿನ ಕುರಿತು ತಿಳಿಸಿದೆ.ಸಿದ್ದರಾಮಯ್ಯನವರು ತಿರಂಗ ಯಾತ್ರೆ ಕುರಿತು ರಾಜಕೀಯ ಮಾಡುತ್ತಿದ್ದಾರೆ. ಭಾರತೀಯರ ದೇಶ ಪ್ರೇಮದ ಬಗ್ಗೆ ಪ್ರಶ್ನೇ ಮಾಡುತ್ತಾರೆ ಇದು ಶೋಬೆ ತರಲ್ಲ. ಸಿದ್ದರಾಮಯ್ಯ ಎಂಥ ದೇಶ ಭಕ್ತ ಎಂಬುದಕ್ಕೆ ತ್ರಿವರ್ಣ ದ್ವಜದ ಬಣ್ಣ ಹೇಳುವಾಗ ಕೆಂಪು ಎಂದಿದ್ದಾರೆ.ವಇದು ಸಿದ್ದರಾಮಯ್ಯ ಅವರ ಅಜ್ಞಾನ ಪ್ರದರ್ಶನ ಮಾಡಿದ್ದಾರೆ.ಸಿದ್ದರಾಮಯ್ಯ ಅವರಿಂದ ಪಾಠ ಕಲಿಯುವ ಅಗತ್ಯ ನಮ್ಮ ಪಕ್ಷಕ್ಕಿಲ್ಲ. ನಾವು ದೇಶ ಪ್ರೇಮಿಗಳು .ವಿಶ್ವದಲ್ಲೇ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನ ರಾಮ ಮಂದಿರ ಕಟ್ಟುವ ಮೂಲಕ ನೀಡಿದ್ದೇವೆ ಎಂದು ನಾರಾಯಣ ಸ್ವಾಮಿ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

11/08/2022 04:12 pm

Cinque Terre

31.43 K

Cinque Terre

1

ಸಂಬಂಧಿತ ಸುದ್ದಿ