ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಲು ಸಿದ್ಧತೆ

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯನ ಧನದಾಹಿ ಮನಸ್ಥಿತಿಯಿಂದ ಗರ್ಭಕೋಶ ಕಳೆದುಕೊಂಡ ಮಹಿಳೆಯರು ಇದೀಗ ಮತ್ತೆ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಈ ಸಂತ್ರಸ್ತ ಮಹಿಳೆಯರು ಈ ಹಿಂದೆ ಏಪ್ರಿಲ್ 25 ರಂದು ರಾಣೆಬೆನ್ನೂರಿಂದ ಶಿಗ್ಗಾಂವಿಯ ಸಿಎಂ ಮನೆಯವರೆಗೆ ಪಾದಯಾತ್ರೆ ಹೊರಟಿದ್ದರು. ಈ ಸಂದರ್ಭದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಜಿಲ್ಲಾಡಳಿತ ಪ್ರತಿಭಟನಾಕಾರರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ, ಸಿಎಂ ಜೊತೆ ಚರ್ಚಿಸಿ ತಮಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿತ್ತು. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎಂದು ಮಹಿಳೆಯರಿಗೆ ತಿಳಿಸಲಾಗಿತ್ತು. ಆದರೆ, ಸಿಎಂ ಮತ್ತು ಜಿಲ್ಲಾಡಳಿತ ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದೆ. ಪರಿಣಾಮ ಸಂತ್ರಸ್ತರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಪ್ರತಿಭಟನೆ ನಡೆದು ನೂರು ದಿನಗಳ ಮೇಲಾದರೂ ಹಾವೇರಿ ಜಿಲ್ಲಾಡಳಿತ ಇವರ ಕಡೆ ಗಮನ ಹರಿಸಿಲ್ಲ. ಇದರಿಂದ ನೊಂದ ಮಹಿಳೆಯರು ಇದೀಗ ಅಗಸ್ಟ್ 13 ರಿಂದ ಮತ್ತೆ ಸಿಎಂ ಮನೆಯವರಿಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ.

Edited By : Shivu K
PublicNext

PublicNext

11/08/2022 02:47 pm

Cinque Terre

30.1 K

Cinque Terre

1

ಸಂಬಂಧಿತ ಸುದ್ದಿ