ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾರೋ ಹೇಳಿದರು ಅಂತ ಸಿಎಂ ಬದಲಾವಣೆ ಆಗಲ್ಲ: ವಿಜಯೇಂದ್ರ

ರಾಯಚೂರು: ನಮ್ಮ ತಂದೆಯವರು ಹಿಂದಿನಿಂದಲೂ ರಾಯರ ದರ್ಶನ ಪಡೆದುಕೊಂಡೇ ಒಳ್ಳೆ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಮಂತ್ರಾಲಯದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಮಂತ್ರಾಲಯ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕವೇ ಪ್ರೇರಣೆ ಸಿಕ್ಕಿರುವುದು. ರಾಯರ ಆರಾಧನಾ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಬಂದಿದ್ದೇವೆ. ಯಾರೋ ಒಬ್ಬರಿಬ್ಬರೂ ಹೇಳಿದ ತಕ್ಷಣವೇ ಸಿಎಂ ಬದಲಾವಣೆ ಆಗುವುದಿಲ್ಲ. ಇದೆಲ್ಲಾ ಊಹಾಪೋಹಗಳು ಎಂದಿದ್ದಾರೆ.

ರಾಷ್ಟ್ರ ಹಾಗೂ ರಾಜ್ಯದ ಅಧ್ಯಕ್ಷರು ಸಹ ಸಿಎಂ ಮುಂದುವರಿಕೆ ಬಗ್ಗೆ ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೆವೆ ಅನ್ನೋ ನಂಬಿಕೆಯಿದೆ. ಪಕ್ಷವನ್ನ ಮತ್ತೊಮ್ಮೆ ಅಧಿಕಾರಕ್ಕೆ ತರಲು ರಾಜ್ಯಪ್ರವಾಸ ಮಾಡುತ್ತೇವೆ. ರಾಜ್ಯಾಧ್ಯಕ್ಷರು ಸಿಎಂ ನೇತೃತ್ವದಲ್ಲಿ ಒಂದು ತಂಡ, ಯಡಿಯೂರಪ್ಪ ನೇತೃತ್ವದಲ್ಲಿ ಒಂದು ತಂಡ ಹೀಗೆ ಯೊಜನೆ ರೂಪಿಸಲಾಗುತ್ತಿದೆ. ರಾಜ್ಯ ನಾಯಕರೆಲ್ಲಾ ಸೇರಿ ರಾಜ್ಯ ಪ್ರವಾಸದ ಬಗ್ಗೆ ಅಂತಿಮ ರೂಪರೇಷ ಸಿದ್ದಪಡಿಸುತ್ತಾರೆ ಎಂದರು ಅಶ್ವಥ್‌ ನಾರಾಯಣ ನಕಲಿ ಸರ್ಟಿಫಿಕೇಟ್ ರಾಜ,ಶೂರ ಅನ್ನೊ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಚುನಾವಣೆ ಹತ್ತಿರದಲ್ಲಿರುವಾಗ ಹೇಳಿಕೆ ಸಹಜ. ಇದಕ್ಕೆ ಅಶ್ವಥ್‌ ನಾರಾಯಣವೇ ಉತ್ತರಿಸುತ್ತಾರೆ ಎಂದರು.

Edited By : Nagaraj Tulugeri
PublicNext

PublicNext

11/08/2022 01:55 pm

Cinque Terre

17.69 K

Cinque Terre

0