ರಾಮನಗರ: ಸಿದ್ದರಾಮೋತ್ಸವದಿಂದ ಬಿಜೆಪಿಯವರಿಗೆ ನಡುಕ ಶುರುವಾಗಿದೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಅಶ್ವತ್ಥ್ ನಾರಾಯಣ್ ಮಾಗಡಿಯಲ್ಲಿ ಟಾಂಗ್ ನೀಡಿದರು. ನಮಗೆ ಏನೂ ಭಯ ಇಲ್ಲ. ಕಾಂಗ್ರೆಸ್‌ನಲ್ಲಿರುವ ನಾಯಕರಿಗೆ ನಡುಕ ಬಂದಿದೆ. ಕಾಂಗ್ರೆಸ್‌ನಲ್ಲಿರುವ ನಾಯಕರಿಗೆ ಸಿಎಂ ಕುರ್ಚಿ ಯಾರಿಗೆ ಅನ್ನೋ ನಡುಕ ಶುರುವಾಗಿದೆ. ಕಾಂಗ್ರೆಸ್ ಪಕ್ಷ ಅಂದ್ರೆ ಅದು ಸಿದ್ದರಾಮಯ್ಯ ಅನ್ನೋ ಹಾಗಾಗಿದೆ ಎಂದಿದ್ದಾರೆ.
ಬೇರೆ ಜನಾಂಗದಲ್ಲಿರುವ ನಾಯಕರು ಆ ಪಕ್ಷದಲ್ಲಿ ಯಾಕೆ ಇರೋದಕ್ಕೆ ಹೋಗ್ತಾರೆ? ಕಾಂಗ್ರೆಸ್‌ನಲ್ಲಿ ಭವಿಷ್ಯ ಇಲ್ಲ. ನಮಗೆ ಯಾಕಪ್ಪಾ ಈ ಪಕ್ಷ ಬರೀ ಸಿದ್ದರಾಮಯ್ಯ ಅನ್ನೋದಾದ್ರೆ? ಅಂತ ಕೆಲವರು ಯೋಚಿಸುತ್ತಾ ಇದ್ದಾರೆ ಎಂದರು. ಇನ್ನೂ ಇದೇ ವೇಳೆ ಸಚಿವ ಅಶ್ವಥ್ ನಾರಾಯಣ್, ಸಿದ್ದರಾಮಯ್ಯಗೆ ಡಿಕೆಶಿ ಜೈಕಾರ ವಿಚಾರವಾಗಿ ಟಾಂಗ್ ನೀಡಿದ್ರು. ಸಿದ್ದರಾಮಯ್ಯಗೆ ಜೈಕಾರ ಹಾಕಿದ ಕ್ಷಣವೇ ಡಿಕೆ ಶಿವಕುಮಾರ್ ಜೈ ಆಗೋದ್ರು. ಕಾಂಗ್ರೆಸ್ ಪಕ್ಷವನ್ನ ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅವರಿಗೆ ಸೀಮಿತ ಮಾಡಿಕೊಂಡತಾಗಿದೆ. ಸಿದ್ದರಾಮಯ್ಯನವರಿಗೂ ವಯಸ್ಸು ಆಗಿಬಿಟ್ಟಿದೆ. ಪಾಪ 75 ವರ್ಷ ಆಗಿದೆ, ಹಾಗಗಿ ಅವರೂ ಸಹ ಈ ಸಿಎಂ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯಾಗಿಲ್ಲ. ಆದ್ರೂ ಸಹ ಕಾಂಗ್ರೆಸ್‌ನವರಿಗೆ ಸಿದ್ದರಾಮಯ್ಯನವರೇ ಗತಿಯಾಗಿಬಿಟ್ಟಿದೆ ಎಂದರು.
PublicNext
09/08/2022 08:11 am