ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನಗೆ 1 ವರ್ಷ : ಎತ್ತು ತಿವಿದು ಅಮ್ಮ ಸತ್ತು ಹೋದಳು : ಕಣ್ಣೀರಿಟ್ಟ ಉಪರಾಷ್ಟ್ರಪತಿ!

ನವದೆಹಲಿ : ಆಗಸ್ಟ್ 10ಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧಿಕಾರವಧಿ ಕೊನೆಗೊಳ್ಳಲಿದೆ. ಹಾಗಾಗಿ ಇಂದು ಸಂಸತ್ತಿನ ಸದಸ್ಯರು ರಾಜ್ಯಸಭಾ ಚೇರ್ಮನ್ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಬೀಳ್ಕೊಡುಗೆ ನೀಡಿದರು.ಸದನದಲ್ಲಿ ಉಪರಾಷ್ಟ್ರಪತಿಗೆ ಬೀಳ್ಕೊಡುವ ವೇಳೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡರೇಕ್ ಓಬ್ರಿಯಾನ್ ಒಂದು ಕಥೆ ಹೇಳಲು ಆರಂಭಿಸಿದರು. ಈ ಕಥೆಯನ್ನು ಕೇಳುತ್ತಿದ್ದಂತೆಯೇ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ವೆಂಕಯ್ಯ ನಾಯ್ಡು ಭಾವುಕರಾದರು.

ಹೌದು ಅದು ಸ್ವತಂ ವೆಂಕಯ್ಯ ನಾಯ್ಡು ಅವರ ಬಾಲ್ಯದ ದಿನಗಳ ಕಥೆಯಾಗಿತ್ತು. ಆಗತಾನೆ ಸ್ವಾತಂತ್ರ್ಯ ಸಿಕ್ಕ ಸಮಯ ಆ ವೇಳೆ ಊಳಲು ಎಷ್ಟು ಸ್ವಂತದ ಎತ್ತುಗಳಿವೆ ಎನ್ನುವ ಆಧಾರದ ಮೇಲೆ ಶ್ರೀಮಂತಿಕೆ ನಿರ್ಧಾರವಾಗುತ್ತಿತ್ತು. ಒಂದು ಜೋಡಿ ಎತ್ತುಗಳು ನಿಮ್ಮಲ್ಲಿದ್ದರೆ, ಒಂದು ಮಟ್ಟಿಗೆ ಧನಿಕರೆಂದೇ ಗುರುತಿಸಲಾಗುತ್ತಿತ್ತು.

ಪ್ರತಿದಿನ ಮನೆಯುವರ ಆರೈಕೆಯಲ್ಲಿಯೇ ಬೆಳೆಯತ್ತಿದ್ದ ಎತ್ತುಗಳ ಪೈಕಿ ಒಂದು ಎತ್ತು ಮನೆಯ ಮಹಿಳೆಯ ಮೇಲೆ ದಾಳಿ ಮಾಡಿಬಿಟ್ಟಿತು. ಕೈಯಲ್ಲಿ ಒಂದು ವರ್ಷದ ಮಗುವನ್ನು ಹಿಡಿದುಕೊಂಡಿದ್ದ ಮಹಿಳೆಯ ಹೊಟ್ಟೆಗೆ ಎತ್ತಿನ ಕೊಂಬುಗಳು ತಿವಿದಿದ್ದವು. ರಕ್ತಚೆಲ್ಲುತ್ತಿದ್ದರು. ಮಗುವನ್ನು ಆಕೆ ರಕ್ಷಣೆ ಮಾಡಿದ್ದಳು. ಈ ಗದ್ದಲ ಕೇಳಿ ಸ್ಥಳಕ್ಕೆ ಆಗಮಿಸಿದ ಮನೆಯೆ ಇತರರು, ಶೀಘ್ರವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಆಕೆ ಬದುಕುಳಿಯಲಿಲ್ಲ. ಅಮ್ಮನೊಂದಿಗೆ ಆಡಬೇಕಾದ ವಯಸ್ಸಿನಲ್ಲಿಯೇ ಒಂದು ವರ್ಷದ ಹುಡುಗ ತನ್ನ ತಾಯಿಯನ್ನು ಕಳೆದುಕೊಂಡಿದ್ದ. ಇದು ನನ್ನ ಕಥೆಯಲ್ಲ. ನಿಮ್ಮ ಕಥೆ ಸರ್. ನಿಮ್ಮ ಜೀವನದ ಆರಂಭಿಕ ದಿನಗಳ ಬಹುದೊಡ್ಡ ನಷ್ಟದ ಕಥೆ' ಎಂದು ಡರೇಕ್ ಒಬ್ರಿಯಾನ್ ಹೇಳುತ್ತಿದ್ದಂತೆ ವೆಂಕಯ್ಯ ನಾಯ್ಡು ಭಾವುಕರಾದರು.

ನಿಮ್ಮ ಬದುಕಿನ ಬಗ್ಗೆ ಆತ್ಮಚರಿತ್ರೆ ಬರೆಯಬೇಕು ಎಂದು ಕೇಳಿಕೊಂಡರು.

Edited By : Nirmala Aralikatti
PublicNext

PublicNext

08/08/2022 10:10 pm

Cinque Terre

81.86 K

Cinque Terre

3

ಸಂಬಂಧಿತ ಸುದ್ದಿ