ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈತ್ರಿ ಸರ್ಕಾರದ ವಿರುದ್ಧವೇ ನಿತಿಶ್ ಸಮರ ಸಾರಿದರೇ ? ಇಲ್ಲಿವೆ ಆ ಐದು ಕಾರಣಗಳು !

ಪಾಟ್ನಾ: ಬಿಹಾರ್ ಮುಖ್ಯಮಂತ್ರಿ ನಿತಿಶ್ ಕುಮಾರ್ ಇದೇ ಮಂಗಳವಾರ ತಮ್ಮ ಜೆಡಿಯು ಪಕ್ಷದ ಎಲ್ಲ ಶಾಸಕರು ಹಾಗೂ ಸಂಸದರ ಸಭೆಯನ್ನ ಕರೆದಿದ್ದಾರೆ. ಈ ಒಂದು ಸಭೆ ನಿತಿಶ್ ಕುಮಾರ್ ಅವರ ಕೋಪ ಮತ್ತು ಮೈತ್ರಿಪಾಲುದಾರ ಬಿಜೆಪಿಯೊಂದಿಗಿನ ಸಂಘರ್ಷವನ್ನ ಸೂಚಿಸುವಂತೇನೆ ಇದೆ.

ನಿತಿಶ್ ಕುಮಾರ್ ಘರ್ಷಣೆಗೆ ಕಾರಣ ಏನು ? ಬನ್ನಿ, ಹೇಳುತ್ತೇವೆ ಆ ಐದು ಕಾರಣಗಳು !

1.

ಬಿಹಾರ್ ವಿಧಾನಸಭಾ ಸ್ಪೀಕರ್ ವಿಜಯ್ ಕುಮರ್ ಸಿನ್ಹಾ ನಿತಿಶ್ ಕುಮಾರ್ ಮೈತ್ರಿ ಸರ್ಕಾರದ ವಿರುದ್ಧವೇ ಹಲವು ಬಾರಿ ಪ್ರಶ್ನೆ ಎತ್ತಿದ್ದಾರೆ. ಇದರಿಂದ ನಿತಿಶ್ ಕುಮಾರ್ ಹಲವು ಬಾರಿ ತಾಳ್ಮೆ ಕೂಡ ಕಳೆದುಕೊಂಡಿದ್ದು ವಿಜಯ್‌ಕುಮಾರ್ ಸಿನ್ಹಾರನ್ನ ತೆಗೆಯಲೇಬೇಕು ಅಂತಲೇ ನಿರ್ಧರಿಸಿದ್ದಾರೆ.

2.

ಮೋದಿ ಸರ್ಕಾರ 2019 ರಲ್ಲಿ ನಿತಿಶ್ ಕುಮಾರ್ ಜೆಡಿಯು ಪಕ್ಷಕ್ಕೆ ಒಂದೇ ಒಂದು ಸ್ಥಾನ ನೀಡಿದೆ. ಹೀಗಾಗಿಯೇ ಅಂದಿನಿಂದಲೂ ನಿತಿಶ್ ಅಸಮಾಧಾನಗೊಂಡಿದ್ದರು.ಆದರೆ, ಈ ಒಂದು ಸಿಟ್ಟನ್ನ ತಮ್ಮ ಬಿಹಾರ್ ಕ್ಯಾಬಿನೆಟ್ ವಿಸ್ತರಣೆ ಸಮಯದಲ್ಲಿ ತೀರಸಿಕೊಂಡೇ ಬಿಟ್ಟರು. ತಮ್ಮ ಪಕ್ಷದ 8 ಜನರನ್ನ ಸಂಪುಟಕ್ಕೆ ಸೇರಿಸಿಕೊಂಡು ಬಿಜೆಪಿಯ ಒಬ್ಬರಿಗೆ ಪಾತ್ರ ಅವಕಾಶ ಮಾಡಿಕೊಟ್ಟರು.

3.

ಪ್ರಧಾನಿ ಮೋದಿ ಅವರು ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳನ್ನ ಏಕಕಾಲದಲ್ಲಿಯೇ ನಡೆಸಲು ನಿರ್ಧರಿಸಿದರು. ಈ ಒಂದು ನಿರ್ಧಾರಕ್ಕೆ ಬಿಹಾರ್ ಮುಖ್ಯಮಂತ್ರಿ ನಿತಿಶ್ ಕುಮಾರ್ ವಿರೋಧ ವ್ಯಕ್ತಪಡಿಸಿದರು. ವಿಪಕ್ಷಗಳೂ ಇದನ್ನ ಅಷ್ಟೇ ತೀವ್ರವಾಗಿಯೇ ವಿರೋಧಿಸಿದವು.

4.

ಬಿಜೆಪಿ ಮಿನಿಸ್ಟರ್‌ಗಳನ್ನ ತಮ್ಮ ಕ್ಯಾಬಿನೆಟ್ ನಲ್ಲಿ ಸೇರಿಸಿಕೊಳ್ಳಲು ನಿತಿಶ್ ಕುಮಾರ್ ರೆಡಿನೇ ಇದ್ದಾರೆ. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯಂತೇನೆ ಎಲ್ಲವೂ ನಡೆಯೇಬೇಕು. ಅಮಿತ್ ಶಾ ಅವರಿಗೆ ಆಪ್ತರಾಗಿರೋರನ್ನೇ ಕ್ಯಾಬಿನೆಟ್ ನಲ್ಲಿ ಸೇರಿಸಿಕೊಳ್ಳಬೇಕಾಗಿರೋದ್ರಿಂದಲೇ ನಿತಿಶ್ ಕುಮಾರ್ ಹಿಂಜರಿದಿದ್ದಾರೆ ಎಂದು ಮೂಲಗಳು ಹೇಳಿವೆ.

5.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮಿತ್ರಪಕ್ಷಗಳಿಗೆ ನೀಡಿರೋ ಕೇಂದ್ರ ಪ್ರಾತಿನಿಧ್ಯದ ಪ್ರಸ್ತಾಪದ ಬಗ್ಗೆ ಕೂಡ ನಿತಿಶ್ ಕುಮಾರ್ ಅವರಿಗೆ ಅಸಮಾಧಾನ ಇದೆ. ಜೆಡಿಯು ತೊರೆದ ಮಾಜಿ ಕೇಂದ್ರ ಸಚಿವ ಆರ್‌ಪಿ.ಸಿಂಗ್,ಬಿಜೆಪಿ ನಾಯಕತ್ವದೊಂದಿಗೆ ನೇರವಾಗಿಯೇ ವ್ಯವಹರಿಸಿದ್ದಾರೆ.

====

ಇಷ್ಟೊಂದು ಕಾರಣಗಳನ್ನ ಇಟ್ಟುಕೊಂಡೇ ನಿತಿಶ್ ಕುಮಾರ್ ನಾಳೆ ಸಭೆಯನ್ನ ಕರೆದಂತಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಭೆ ಭಾರೀ ಮಹತ್ವ ಪಡೆದಿದೆ. ಹಾಗೇನೆ ಬಿಹಾರ್ ನಲ್ಲಿ ನಿತಿಶ್ ಸರ್ಕಾರ ಉಳಿಯುತ್ತದೆಯೇ ಅನ್ನೋ ಪ್ರಶ್ನೆಯನ್ನೂ ಮೂಡಿಸಿದೆ.

Edited By :
PublicNext

PublicNext

08/08/2022 12:47 pm

Cinque Terre

39.62 K

Cinque Terre

5

ಸಂಬಂಧಿತ ಸುದ್ದಿ